ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್
Update: 2018-08-25 19:38 IST
ಮಂಗಳೂರು, ಆ.25: ಯಾವುದೇ ಫಲಾನುಭವಿಗೆ ಪಿಂಚಣಿಯು ದೊರೆಯದಿದ್ದ ಪಕ್ಷದಲ್ಲಿ ಈ ವಿಚಾರವನ್ನು ಗ್ರಾಮ ಕರಣಿಕರಿಗೆ ಮತ್ತು ತಾಲೂಕು ತಹಶೀಲ್ದಾರ್‌ರ ಗಮನಕ್ಕೆ ತರಬಹುದಾಗಿದೆ.
ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ಪ್ರಸ್ತುತ ಖಜಾನೆ 1 ಮತ್ತು 2ರ ಮುಖಾಂತರ ಪಿಂಚಣಿಯನ್ನು ವಿತರಿಸ ಲಾಗುತ್ತಿದೆ. ಕೆಲವೊಂದು ಪಿಂಚಣಿದಾರರಿಗೆ ಪಿಂಚಣಿಯು ದೊರಕುತ್ತಿಲ್ಲವೆಂದು ತಿಳಿದುಬಂದಿದೆ.
ಪ್ರತೀ ಹೋಬಳಿಯಲ್ಲಿ ಪಿಂಚಣಿ ಅದಾಲತನ್ನು ಕೂಡ ಮಂಗಳೂರು ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೂಡ ಅಹವಾಲನ್ನು ಸಲ್ಲಿಸಬಹುದಾಗಿದೆ ಎಂದು ಮಂಗಳೂರು ತಾಲೂಕು ತಹಶೀಲ್ದಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.