ಪ್ರತ್ಯೇಕ ಪ್ರಕರಣ: ಕುಂದಾಪುರ ಜಪ್ತಿ ಗ್ರಾಮದ ಇಬ್ಬರು ನಾಪತ್ತೆ
Update: 2018-08-25 20:34 IST
ಕುಂದಾಪುರ, ಆ. 25: ಕುಂದಾಪುರ ಜಪ್ತಿ ಗ್ರಾಮದ ಇಬ್ಬರು ಆ. 24ರ ಬೆಳಗ್ಗೆಯಿಂದ ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಲ್ಯಾಂಡ್ ಲಿಂಕ್ ವ್ಯವಹಾರ ಮಾಡಿಕೊಂಡಿದ್ದ ಕುಂದಾಪುರ ಜಪ್ತಿ ಗ್ರಾಮದ ಕರಿಕಲ್ಕಟ್ಟೆಯ ಶಂಶುದ್ದೀನ್ ಸಾಹೇಬ್ ಎಂಬವರ ಪುತ್ರ ಮುಹಮ್ಮದ್ ಅನಿಸ್ (33) ಎಂಬವರು ಅಂದು ಬೆಳಗ್ಗೆ ಮನೆಯಿಂದ ಹೋದವರು ಮೊಬೈಲ್ ಸ್ವಿಚ್‌ಆಫ್ ಮಾಡಿ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕುಂದಾಪುರ ಕಂಪ್ಯೂಟರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಜಪ್ತಿ ಗ್ರಾಮದ ಜನತಾ ಕಾಲನಿಯ ಹರಿಶ್ಚಂದ್ರ ಪ್ರಭು ಎಂಬವರ ಮಗಳು ವಿನುತಾ (23) ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ನಾತ್ತೆಯಾಗಿದ್ದಾರೆ ಎಂದು ದೂರಲಾಗಿದೆ.