ಮಹಿಳಾ ಹಾಕಿ: ಭಾರತಕ್ಕೆ ಭರ್ಜರಿ ಜಯ

Update: 2018-08-25 15:18 GMT

ಜಕಾರ್ತ, ಆ.25: ಭಾರತ ಮಹಿಳಾ ತಂಡ ಏಶ್ಯಾ ಗೇಮ್ಸ್‌ನ ಬಿ ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 4-1 ಅಂತರದಿಂದ ಜಯ ಸಾಧಿಸಿದೆ.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ಗುರ್ಜಿತ್ ಕೌರ್ ಎರಡು ಗೋಲು ಬಾರಿಸಿದರೆ, ನವನೀತ್ ಹಾಗೂ ವಂದನಾ ಕಟಾರಿಯಾ ತಲಾ ಒಂದು ಗೋಲು ಬಾರಿಸಿದರು. ಕೊರಿಯಾದ ಪರ ಲೀ ಯರಿಮ್ ಏಕೈಕ ಗೋಲು ಬಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News