ತೊಡಿಕಾನ-ಪಟ್ಟಿ ರಸ್ತೆಯ ಮೂಲಕ ಕೊಡಗು ಸಂಪರ್ಕ: ರಸ್ತೆ ದುರಸ್ತಿ ಕಾರ್ಯ ಆರಂಭಿಸಿ- ಕೆ.ಜಿ ಬೋಪಯ್ಯ

Update: 2018-08-25 15:32 GMT

ಅರಂತೋಡು, ಆ. 25: ತೊಡಿಕಾನ- ಪಟ್ಟಿ - ಕರಿಕೆ ರಸ್ತೆಯ ಮೂಲಕ ಕೊಡಗಿಗೆ ಸಂಪರ್ಕ ಕಲ್ಪಿಸಲು ನಾಳೆಯಿಂದಲೇ ಊರವರು ಶ್ರಮದಾನದ ಮೂಲ ಕೆಲಸ ಆರಂಭಿಸಿ ಎಂದು ಹೇಳಿದರು.

ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಜೋಡುಪಾಲ ನಿರಾಶ್ರಿತರ ಅರಂತೋಡು, ಸಂಪಾಜೆ ಸಹಾಯ ಕೇಂದ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ತೊಡಿಕಾನ -ಪಟ್ಟಿ- ರಸ್ತೆಯ ಮೂಲಕ ರಸ್ತೆ ದುರಸ್ತಿ ಮಾಡುವಂತೆ ಅರಣ್ಯ ಇಲಾಖೆಯಿಂದ ಯಾವುದೇ ಸಮಸ್ಯೆ ಮಾಡಬಾರದೆಂದು ಊರಿನವರ ಮನವಿ ಮೇರೆಗೆ ಕೊಡಗಿನ ಡಿ.ಎಫ್.ಒಗೆ ಪೋನ್ ಮುಖಾಂತರ ಸಂಪರ್ಕ ಮಾಡಿ ಮಾತನಾಡಿದರು.ಬಳಿಕ ಶಾಸಕರು ಊರವರಿಗೆ ನಾಳೆಯಿಂದಲೇ ರಸ್ತೆ ದುರಸ್ತಿ ಕಾರ್ಯ ಆರಂಭ ಮಾಡಬಹುದು ಎಂದು ಹೇಳಿದರು.

ಅಲ್ಲದೆ ಈ ಸಂದರ್ಭದಲ್ಲಿ ಹಾಜರಿದ್ದ ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಮಿಶ್ರಾ ಅವರಿಗೆ ರಸ್ತೆ ವೀಕ್ಷಣೆ ಮಾಡುವಂತೆ ಸೂಚಿಸಿದರು.

ಹಾಜರಿದ್ದ ಕೃಷಿಕ ವಸಂತ್ ತೊಡಿಕಾನ ಅವರು ತೊಡಿಕಾನ- ಪಟ್ಟಿ -ಕರಿಕೆ ಸಂಪರ್ಕ ರಸ್ತೆ ಸುಳ್ಯ ತಾಲೂಕು ಕೇಂದ್ರದಿಂದ ಅತೀ ಹತ್ತಿರದ ಹಾದಿಯಾ ಗಿರುತ್ತದೆ.ತೊಡಿಕಾನದಿಂದ ಕೇವಲ 18 ಕಿ.ಮೀ ಅಂತರದಲ್ಲಿ ಕೊಡಗಿನ ಭಾಗಮಂಡಲವನ್ನು ತಲುಪಬಹುದಾಗಿದೆ.ಲಘು ವಾಹನ ಸಂಚಾರಿ ಸುವುದಕ್ಕೆ ಯಾವುದೇ ಸಮಸ್ಯೆ ಆಗದು.ಇದರಿಂದ ಜನರ ಶ್ರಮ,ಇಂದನ,ಸಮಯ ಉಳಿತಾಯ ಆಗುತ್ತದೆ ಎಂದು ಹೇಳಿದರು. ನಿರಾಶ್ರಿತರು ತಮ್ಮ ತಮ್ಮ  ಸಮಸ್ಯೆಯನ್ನು ಶಾಸಕರಿಗೆ ಹೇಳಿಕೊಂಡರು.ಶಾಸಕರು ಯಾವುದೇ ಕಾರಣಕ್ಕೂ ಆತಂಕಗೊಳ್ಳಬೇಡಿ ಸೂಕ್ತ ವ್ಯವಸ್ಥೆ ಮಾಡಲಾಗುವುದೆಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪ್ರಾಶಾಂತ್ ಮಿಶ್ರಾ,ಪುತ್ತೂರು ಉಪವಿಭಾಗದ ಎ.ಸಿ ಕೃಷ್ಣ ಮೂರ್ತಿ, ತಹಶೀಲ್ದಾರ್, ಕುಂಞಮ್ಮ, ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ ಇತರರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News