×
Ad

ಪ್ರತಿಯೊಬ್ಬರಲ್ಲಿಯೂ ಕಲಾ ಮನಸ್ಸು ಬೆಳೆಯಲಿ: ಡಾ.ವಿಜಯ ಬಲ್ಲಾಳ್

Update: 2018-08-25 21:26 IST

ಉಡುಪಿ, ಆ. 25: ಪ್ರತಿಯೊಬ್ಬರಲ್ಲಿಯೂ ಕಲಾ ಮನಸ್ಸು ಬೆಳೆಯಬೇಕು. ಆ ಮನಸ್ಸು ಪ್ರತಿಯೊಂದು ವಸ್ತುಗಳನ್ನು ಅದೇ ಮನಸ್ಸಿನಿಂದ ಅಸ್ವಾಧಿಸುತ್ತದೆ. ಇದರಿಂದ ನಮ್ಮ ಆರೋಗ್ಯ ಹಾಗೂ ಬೆಳವಣಿಗೆ ಉತ್ತಮವಾಗಿರುತ್ತದೆ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಹೇಳಿದ್ದಾರೆ.

ಉಡುಪಿ ಆರ್ಟಿಸ್ಟ್ ಫೋರಂ ವತಿಯಿಂದ ದೃಷ್ಠಿ ಗ್ಯಾಲರಿಯಲ್ಲಿ ಆಯೋಜಿಸ ಲಾದ ಮೈಸೂರಿನ ಕಲಾವಿದ ಕೆ.ಎಸ್.ಪರಮೇಶ್ವರ್ ಅವರ ಮೂರು ದಿನಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಶನಿವಾರ ಉ್ಘಾಟಿಸಿ ಅವರು ಮಾತನಾಡುತಿದ್ದರು.

ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ಸದಸ್ಯ ರಾಜೇಂದ್ರ ಕೆದಿಗೆ ಮಾತ ನಾಡಿ, ಕಲೆಗೆ ಸಂಬಂಧಿಸಿದಂತೆ ಸರಕಾರದಿಂದ ಹಲವು ಯೋಜನೆಗಳಿದ್ದು, ಅವುಗಳನ್ನು ಪಡೆದುಕೊಳ್ಳುವಾಗ ಕಲಾವಿದರು ಸಾಕಷ್ಟು ಎಚ್ಚರ ಇರಬೇಕು. ಇಂತಹ ಯೋಜನೆಗಳಿಗೆ ಕರಾವಳಿ ಭಾಗದಿಂದ ಅರ್ಜಿಗಳು ಸಲ್ಲಿಕೆಯಾಗುತ್ತಿ ರುವುದು ಬಹಳ ಕಡಿಮೆ ಎಂದರು.

ಕಲಾವಿದರು ಹೊಸತನವನ್ನು ಮೈಗೂಡಿಸಿಕೊಳ್ಳಬೇಕು. ಇಂದು ನಾವು ಪ್ರಕೃತಿ ಯೊಂದಿಗೆ ಸಂಪರ್ಕ ಕಡಿದುಕೊಂಡ ಪರಿಣಾಮ ಹಲವು ಅನಾಹುತಗಳು ಸಂಭವಿಸುತ್ತಿವೆ. ಪ್ರಕೃತಿಯನ್ನು ಬಿಟ್ಟು ನಾವು ಹೆಚ್ಚು ವ್ಯವಹಾರಿಕವಾಗಿ ನಡೆದು ಕೊಳ್ಳುತ್ತಿದ್ದೇವೆ. ಆದುದರಿಂದ ಕಲೆಗಳ ಶ್ರೀಮಂತಿಕೆಯನ್ನು ಉಳಿಸಿಕೊಂಡು ಪ್ರಕೃತಿಯೊಂದಿಗೆ ಬದುಕಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆಯನ್ನು ಆರ್ಟಿಸ್ಟ್ ಫೋರಂನ ಅಧ್ಯಕ್ಷ ರಮೇಶ್ ರಾವ್ ವಹಿಸಿದ್ದರು. ಕಾರ್ಯದರ್ಶಿ ಸಕು ಪಾಂಗಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿ ದರು. ಕಲಾವಿದ ಕೆ.ಎಸ್.ಪರಮೇಶ್ವರ್ ವಂದಿಸಿದರು. ಆ.27ರವರೆಗೆ ಬೆಳಗ್ಗೆ 10ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಆರ್ಕಿಲಿಕ್ ಮಾಧ್ಯಮದಿಂದ ರಚಿಸಲಾದ ಒಟ್ಟು 42 ಕಲಾಕೃತಿಗಳನ್ನು ಪ್ರದರ್ಶಿಸ ಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News