×
Ad

ಹುಂಚಾರ್‌ಬೆಟ್ಟು ಮತದಾನ ಕೇಂದ್ರದ ರಸ್ತೆ ದುರಸ್ತಿಗೆ ಆಗ್ರಹ

Update: 2018-08-25 21:34 IST

ಕುಂದಾಪುರ, ಆ.25: ಕುಂದಾಪುರ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ವಡೇರಹೋಬಳಿ ಬಿ.ಸಿ.ರೋಡ್‌ನ ಹುಂಚಾರ್‌ಬೆಟ್ಟು ಮತದಾನ ಕೇಂದ್ರದ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಸಿಪಿಎಂ ಅಭ್ಯರ್ಥಿ ಮಂಜುನಾಥ್ ಶೋಗನ್ ಇಂದು ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದರು.

ಹುಂಚಾರ್‌ಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸಾಗುವ ರಸ್ತೆಯು ಹೊಂಡಗುಂಡಿಗಳಿಂದ ಕೆಸರುಮಯವಾಗಿದ್ದು, ಮತ ಚಲಾಯಿಸುವ ಮತ ದಾರರು ನಡೆಯಲು ಕಷ್ಟವಾಗುತ್ತದೆ. ಇದರಿಂದ ಮತದಾನ ಕಡಿಮೆಯಾಗುವ ಸಾದ್ಯತೆ ಇದ್ದು, ಸಂಬಂಧಪಟ್ಟವರು ಕೂಡಲೇ ಕ್ರಮ ವಹಿಸಬೇಕೆಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಿಪಿಎಂ ಮುಖಂಡರಾದ ಉದಯ ಟೈಲರ್, ಸುರೇಶ್ ಕಲ್ಲಾಗರ, ವೆಂಕಟೇಶ್ ಕೋಣಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News