ಶಾಲಾ ಹತ್ಯಾಕಾಂಡದಲ್ಲಿ ಬದುಕುಳಿದ ಬಾಲಕ ಜಿಸಿಎಸ್‌ಇ ಪರೀಕ್ಷೆಯಲ್ಲಿ ಅಗ್ರಸ್ಥಾನಿ

Update: 2018-08-25 17:47 GMT

ದುಬಾಯಿ, ಅ.25: ನಾಲ್ಕು ವರ್ಷಗಳ ಹಿಂದೆ ಪಾಕಿಸ್ತಾನದ ಶಾಲೆಯಲ್ಲಿ ಉಗ್ರರು ನಡೆಸಿದ ಹತ್ಯಾಕಾಂಡದಲ್ಲಿ ಬದುಕುಳಿದ ಬಾಲಕ, ಜನರಲ್ ಸರ್ಟಿಫಿಕೆಟ್ ಆಫ್ ಸೆಕೆಂಡರಿ ಎಜುಕೇಶನ್ (ಜಿಸಿಎಸ್‌ಇ) ಪರೀಕ್ಷೆಯಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದಾನೆ. ಈ ಸಾಧನೆಗಾಗಿ ಆತನಿಗೆ ಟ್ವಿಟರ್‌ನಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

2014ರಲ್ಲಿ ಪೇಶಾವರದ ಸೇನಾ ಪಬ್ಲಿಕ್ ಶಾಲೆಯ ಮೇಲೆ ಉಗ್ರರು ನಡೆಸಿದ ದಾಳಿಯ ವೇಳೆ ಅಹಮದ್ ನವಾಝ್ ಬದುಕುಳಿದಿದ್ದ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿರುವ ಫಲಿತಾಂಶವನ್ನು ಆತ ಟ್ವಿಟರ್‌ನಲ್ಲಿ ಹಾಕಿದ್ದ. ಆತನ ಟ್ವೀಟ್‌ಗೆ 650ಕ್ಕೂ ಅಧಿಕ ರೀಟ್ವೀಟ್‌ಗಳು ಬಂದಿದ್ದು, 600 ಕಮೆಂಟ್ಸ್‌ಗಳು ಬಂದಿವೆ ಎಂದು ಪಾಕಿಸ್ತಾನ ಮಾಧ್ಯಮ ತಿಳಿಸಿದೆ.

ಸದ್ಯ ನವಾಝ್ ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆಯುವ ಕನಸನ್ನು ಹೊಂದಿದ್ದಾನೆ. 2014ರಲ್ಲಿ ಪೇಶಾವರ ಶಾಲೆಯ ಮೇಲೆ ನಡೆದ ಉಗ್ರರ ದಾಳಿಯಲ್ಲಿ 132 ಮಕ್ಕಳೂ ಸೇರಿದಂತೆ 141 ಮಂದಿ ಬಲಿಯಾಗಿದ್ದರು. ಆ ಸಮಯದಲ್ಲಿ ಹದಿನಾಲ್ಕು ವರ್ಷದವನಾಗಿದ್ದ ನವಾಝ್‌ನ ಭುಜಕ್ಕೆ ಗುಂಡು ತಗುಲಿದ್ದು ಆತ ಮೃತಪಟ್ಟಂತೆ ನಾಟಕವಾಡುವ ಮೂಲಕ ದಾಳಿಯಿಂದ ಪಾರಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News