ಡಿವೈಎಸ್ಪಿ ಜೈಶಂಕರ್ ಮುಖ್ಯಮಂತ್ರಿ ಪದಕ
Update: 2018-08-25 23:18 IST
ಉಡುಪಿ, ಆ.25: ಮಲ್ಪೆ ಕರಾವಳಿ ಕಾವಲು ಪಡೆಯ ಉಪಾಧೀಕ್ಷಕ ಜೈಶಂಕರ್ ಟಿ.ಆರ್. 2017ನೆ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಯಾಗಿದ್ದಾರೆ.
23ವರ್ಷಗಳ ಹಿಂದೆ ಪೊಲೀಸ್ ಉಪನಿರೀಕ್ಷಕರಾಗಿ ಪೊಲೀಸ್ ಇಲಾಖೆಗೆ ಸೇರಿಕೊಂಡ ಇವರು, ಪೊಲೀಸ್ ನಿರೀಕ್ಷಕರಾಗಿ, ನಂತರ ಉಪಾಧೀಕ್ಷಕರಾಗಿ ಭಡ್ತಿ ಹೊಂದಿದ್ದರು. ಬೆಂಗಳೂರು, ಕೋಲಾರ, ಗುಲ್ಬರ್ಗ, ಸಿಓಡಿ ವಿಭಾಗ ಗಳಲ್ಲಿ ಮತ್ತು ಉಡುಪಿ ಡಿಸಿಐಬಿಯ ನಿರೀಕ್ಷಕರಾಗಿ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್ಪಿಯಾಗಿ ಅವರು ಕರ್ತವ್ಯ ನಿರ್ವಹಿಸಿದ್ದರು.