111 ಯುಟಿಲಿಟಿ ಹೆಲಿಕಾಪ್ಟರ್ ಖರೀದಿಗೆ ರಕ್ಷಣಾ ಇಲಾಖೆ ಒಪ್ಪಿಗೆ

Update: 2018-08-25 18:07 GMT

ಹೊಸದಿಲ್ಲಿ, ಆ.25: ಭಾರತೀಯ ನೌಕಾಪಡೆಗೆ ಸುಮಾರು 21 ಸಾವಿರ ಕೋಟಿ ರೂ.ವೆಚ್ಚದಲ್ಲಿ 111 ಯುಟಿಲಿಟಿ ಹೆಲಿಕಾಪ್ಟರ್‌ಗಳನ್ನು ಒದಗಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ.

ರಕ್ಷಣಾ ಇಲಾಖೆಯ ಖರೀದಿ ಕುರಿತ ನಿರ್ಧಾರ ಕೈಗೊಳ್ಳುವ ಉನ್ನತ ಸಮಿತಿಯಾಗಿರುವ ರಕ್ಷಣಾ ಖರೀದಿ ಸಮಿತಿ(ಡಿಎಸಿ)ಯ ಸಭೆಯಲ್ಲಿ ಈ ಕುರಿತು ನಿರ್ಧಾರಕ್ಕೆ ಬರಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ಸಂದರ್ಭ ಹಾಗೂ ಶೋಧ , ಗಸ್ತು ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಯುಟಿಲಿಟಿ ಹೆಲಿಕಾಪ್ಟರ್‌ಗಳನ್ನು ಬಳಸಬಹುದಾಗಿದೆ.

ಜೊತೆಗೆ, 3,364 ಕೋಟಿ ರೂ. ಮೊತ್ತದ ದೇಶೀಯ ನಿರ್ಮಿತ 155 ಎಂಎಂ ಫಿರಂಗಿಗಳ ಖರೀದಿಗೂ ಡಿಎಸಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಅಲ್ಲದೆ ನೌಕಾಪಡೆಯ ಬಹುಕಾರ್ಯ ನಿರ್ವಹಿಸುವ 24 ಹೆಲಿಕಾಪ್ಟರ್‌ಗಳ ಖರೀದಿಗೂ ಒಪ್ಪಿಗೆ ನೀಡಲಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ 111 ಯುಟಿಲಿಟಿ ಹೆಲಿಕಾಪ್ಟರ್ ಹಾಗೂ 123 ಬಹುಕಾರ್ಯ ನಿರ್ವಹಿಸುವ ಹೆಲಿಕಾಪ್ಟರ್ ಖರೀದಿಸುವ ಕುರಿತು ಭಾರತೀಯ ನೌಕಾಪಡೆ ಜಾಗತಿಕ ಟೆಂಡರ್ ಕರೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News