ವಸುಂಧರಾ ರಾಜೆ ‘ಗೌರವ ಯಾತ್ರೆ’ಯಲ್ಲಿ ವಾಹನಕ್ಕೆ ಕಲ್ಲುತೂರಾಟ: ಬಿಜೆಪಿಗೆ ಮುಜುಗರ

Update: 2018-08-26 11:28 GMT

ಜೈಪುರ, ಆ.26: ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ ಎಂದು ಬಿಜೆಪಿ ಹೇಳುತ್ತಿರುವ ನಡುವೆಯೇ ಬಿಜೆಪಿಗೆ ಮುಖಭಂಗವಾಗುವಂತಹ ಘಟನೆಗಳು ವಸುಂಧರಾ ರಾಜೆಯ ಗೌರವ ಯಾತ್ರೆಯಲ್ಲಿ ನಡೆಯುತ್ತಿದೆ.

ಮೊನ್ನೆಯಷ್ಟೇ ಜೈಸಲ್ಮೇರ್ ನಲ್ಲಿ ವಸುಂಧರಾ ರಾಜೆಗೆ ಹಲವರು ಕಪ್ಪು ಬಾವುಟ ಪ್ರದರ್ಶಿಸಿದ್ದರು. ನಿನ್ನೆ ವಸುಂಧರಾ ರಾಜೆಯವರ ಗೌರವ ಯಾತ್ರೆ ಜೋಧ್ ಪುರ್ ನಲ್ಲಿ ಸಾಗುತ್ತಿದ್ದ ವೇಳೆ ಸರಕಾರಿ ವಾಹನದ ಮೇಲೆ ಕಲ್ಲುತೂರಾಟ ನಡೆಯಿತು ಜೊತೆಗೆ ಸರಕಾರದ ವಿರುದ್ಧ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು.

ರಾಜೆಯವರ ‘ವಿಜಯ್ ರಥ್’ ವಾಹನದ ಹಿಂದಿದ್ದ ಸರಕಾರಿ ವಾಹನಗಳಿಗೆ ಕಲ್ಲೆಸೆಯಲಾಗಿದ್ದು, ರಜಪೂತ ಸಮುದಾಯದ ಕೃತ್ಯ ಇದು ಎನ್ನಲಾಗಿದೆ. ಜೋಧ್ ಪುರ್ ಜಿಲ್ಲೆಯ ಬವೋರಿ ಗ್ರಾಮದಲ್ಲಿ ರಾಜೆ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಬೇಕಾಗಿತ್ತು. ಒಶಿಯಾನ್ ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ರಾಜೆ ಜೋಧ್ ಪುರಕ್ಕೆ ಬರುತ್ತಿದ್ದರು. ಒಶಿಯಾನ್ ನಲ್ಲಿ ರಾಜೆ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು ಪೋಸ್ಟರ್ ಗಳನ್ನು ಹರಿದು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News