400 ಮೀಟರ್ ಓಟ: ಬೆಳ್ಳಿ ಪಡೆದ ಭಾರತದ ಹಿಮಾ ದಾಸ್, ಮುಹಮ್ಮದ್ ಅನಸ್
Update: 2018-08-26 17:57 IST
ಜಕಾರ್ತ, ಆ.26: ಏಶ್ಯನ್ ಗೇಮ್ಸ್ ನ ಮಹಿಳೆಯರ 400 ಮೀಟರ್ ಓಟದಲ್ಲಿ ಹಿಮಾ ದಾಸ್ ಮತ್ತು ಪುರುಷರ 400 ಮೀಟರ್ ಓಟದಲ್ಲಿ ಮುಹಮ್ಮದ್ ಅನಸ್ ಯಹ್ಯಾ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಅನಸ್ 45.69 ಸೆಕೆಂಡ್ ಗಳಲ್ಲಿ ಮತ್ತು ಹಿಮಾ ದಾಸ್ 50.79 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಬೆಳ್ಳಿ ಪಡೆದರು. ಹಿಮಾ ದಾಸ್ 51.00 ಸೆಕೆಂಡ್ ಗಳಲ್ಲಿ ಗುರಿ ತಲುಪಿ 14 ವರ್ಷದ ರಾಷ್ಟ್ರೀಯ ದಾಖಲೆಯನ್ನು ಮುರಿದು ಫೈನಲ್ ಪ್ರವೇಶಿದ್ದರು .