×
Ad

ರೋಸಾರಿಯೊ ಚರ್ಚ್‌ನಲ್ಲಿ ನೂತನ ಬಿಷಪರ ಕಚೇರಿ ಲೋಕಾರ್ಪಣೆ

Update: 2018-08-26 19:40 IST

ಮಂಗಳೂರು, ಆ. 26: ನೂತನ ಬಿಷಪ್ ವಂ. ಫಾ. ಪೀಟರ್ ಪೌಲ್ ಸಲ್ದಾನ ಅವರ ಬಿಷಪ್ ಕಚೇರಿಯನ್ನು ನಗರದ ರೋಸಾರಿಯೊ ಚರ್ಚ್‌ನಲ್ಲಿ ರವಿವಾರ ಮಾಜಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಆಸ್ಕರ್ ಫೆರ್ನಾಂಡೀಸ್, ಮಂಗಳೂರು ಧರ್ಮ ಪ್ರಾಂತ ಭಾರತವಷ್ಟೇ ಅಲ್ಲದೆ, ಇಡೀ ಜಗತ್ತಿಗೆ ಹಲವಾರು ಕೊಡುಗೆಯನ್ನು ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರು ಧರ್ಮ ಪ್ರಾಂತ ಮುಂಚೂಣಿಯಲ್ಲಿದೆ. ಇದಕ್ಕೆ ಬಿಷಪ್‌ರ ಕೊಡುಗೆ ಅಪಾರ. ಬಿಷಪರು 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇದೇ ಸೆ.15ರಂದು ರೊಜಾರಿಯೊ ಚರ್ಚ್‌ನ ಮೈದಾನದಲ್ಲಿ ನಡೆಯುವ ಮಂಗಳೂರು ಧರ್ಮಪ್ರಾಂತದ ನೂತನ ಧರ್ಮಾಧ್ಯಕ್ಷರ ಪಟ್ಟಾಭಿಷೇಕಕ್ಕೆ ಶುಭ ಹಾರೈಸಿದರು.

ಪ್ರಸ್ತುತ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಧರ್ಮಗುರು ಫಾ. ಜೆ.ಬಿ.ಕ್ರಾಸ್ತಾ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್.ಲೋಬೊ, ಎಂ.ಎ. ಗಫೂರ್, ಕಾರ್ಪೊರೇಟರ್‌ಗಳಾದ ಅಬ್ದುಲ್ ಲತೀಫ್, ನವೀನ್ ಡಿಸೋಜ, ಸಬೀತಾ ಮಿಸ್ಕಿತ್, ಜೆಸಿಂತಾ ಆಲ್ಫ್ರೆಡ್ ಹಾಗೂ ಆಸ್ಕರ್ ಫೆರ್ನಾಂಡೀಸ್ ಪತ್ನಿ ಬ್ಲೊಸೆಮ್ ಫೆರ್ನಾಂಡೀಸ್ ಉಪಸ್ಥಿತರಿದ್ದರು. ಪರಿಷತ್ ಕಾರ್ಯದರ್ಶಿ ಎಂ.ಪಿ.ನರೋನ್ಹಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News