×
Ad

ಉಡುಪಿ ಜೆಡಿಎಸ್‌ನಿಂದ ರಕ್ಷಾ ಬಂಧನ ಆಚರಣೆ

Update: 2018-08-26 19:53 IST

ಉಡುಪಿ, ಆ.26: ಉಡುಪಿ ಜಿಲ್ಲಾ ಜಾತ್ಯತೀತ ಜನತಾ ದಳದ ವತಿಯಿಂದ ರಕ್ಷಾ ಬಂಧನವನ್ನು ಶನಿವಾರ ಪಕ್ಷದ ಉಡುಪಿ ಕೇಂದ್ರ ಕಚೇರಿಯಲ್ಲಿ ಆಚರಿಸಲಾಯಿತು.

ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೇಶ್ ಶೆಟ್ಟಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ವಾಗ್ಮಿ ಬಾರಕೂರು ದಾಮೋದರ ಶರ್ಮ ರಕ್ಷಾ ಬಂಧನ ಮತ್ತು ಅದರ ಮಹತ್ವದ ಕುರಿತು ಮಾಹಿತಿ ನೀಡಿದರು. ಮುಖಂಡ ಅಲೆವೂರು ಗೇಶ್ ಆಚಾರ್ಯ ಶುಭಕೋರಿದರು.

ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ವಾಸುದೇವ ರಾವ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಪರ್ಕಳ, ರಾಜ್ಯ ಕಾರ್ಯದರ್ಶಿ ಶೇಖರ್ ಕೋಟ್ಯಾನ್, ಜಿಲ್ಲಾ ಮುಖಂಡರಾದ ಶಾಲಿನಿ ಬಿ.ಶೆಟ್ಟಿ ಕೆಂಚನೂರು, ರವಿ ಶೆಟ್ಟಿ ಬೈಂದೂರು, ವಿಶಾಲಾಕ್ಷಿ ಆರ್.ಶೆಟ್ಟಿ, ರೋಷಿಣಿ ಪಿ., ಹರಿಣಿ, ಮೋಹಿನಿ, ಜಯಕರ ಪೂಜಾರಿ, ರವಿರಾಜ್ ಸಾಲಿಯಾನ್, ರಂಗ ಎನ್.ಕೋಟ್ಯಾನ್ ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಆಚಾರ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News