ಮಲ್ಪೆ ಮೀನುಗಾರರಿಂದ ವಿಶೇಷ ಸಮುದ್ರ ಪೂಜೆ

Update: 2018-08-26 14:26 GMT

ಮಲ್ಪೆ, ಆ. 26: ಮಲ್ಪೆ ಮೀನುಗಾರರ ಸಂಘದ ವತಿಯಿಂದ ಸಮಸ್ತ ಮೀನು ಗಾರರ ಶೇಯೋಭಿವೃದ್ಧಿಗಾಗಿ ನೂಲ ಹುಣ್ಣಿಮೆ ದಿನವಾದ ಇಂದು ಮಲ್ಪೆಯ ವಡಬಾಂಡೇಶ್ವರ ಕಡಲ ಕಿನಾರೆಯಲ್ಲಿ ಸಮುದ್ರ ಪೂಜೆಯನ್ನು ನೆರವೇರಿಸ ಲಾಯಿತು.

ಬೆಳಗ್ಗೆ ವಡಬಾಂಡೇಶ್ವರ ಬಲರಾಮ ದೇವಸ್ಥಾನ ಹಾಗೂ ನಾಗನಕಟ್ಟೆ ಮತ್ತು ಬೊಬ್ಬರ್ಯ ದೈವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನೂರಾರು ಸಂಖ್ಯೆಯ ಮೀನುಗಾರರು, ಬಳಿಕ ಮೆರವಣಿಗೆಯ ಮೂಲಕ ಮಲ್ಪೆ ಕಡಲ ಕಿನಾರೆಗೆ ಆಗಮಿಸಿದರು. ಕಿನಾರೆಯಲ್ಲಿ ಸಂಪ್ರದಾಯದಂತೆ ಸಮುದ್ರಕ್ಕೆ ಪೂಜೆ ಸಲ್ಲಿಸಿ, ಮತ್ಸ ಸಂಪತ್ತು ವೃದ್ಧಿಯಾಗುವಂತೆ ಹಾಗೂ ಯಾವುದೇ ಅನಾಹುತಗಳು ಸಂಭವಿಸದಂತೆ ಸಮುದ್ರ ದೇವರಲ್ಲಿ ಪ್ರಾರ್ಥಿಸಲಾಯಿತು.

ತದನಂತರ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ನೇತೃತ್ವದಲ್ಲಿ ಹಾಲು, ಹಣ್ಣುಹಂಪಲು, ಎಳನೀರು, ವೀಳ್ಯ ದೆಲೆ, ಹೂವುಗಳನ್ನು ಸಮುದ್ರಕ್ಕೆ ಅರ್ಪಿಸಲಾಯಿತು. ‘ಮೀನುಗಾರರು ಹಾಗೂ ಮೀನುಗಾರಿಕೆಗೆ ಸಂಬಂಧಪಟ್ಟ ಎಲ್ಲರಿಗೆ ಒಳ್ಳೆಯ ದಾಗಲಿ ಮತ್ತು ಉತ್ತಮ ಮತ್ಸ ಸಂಪತ್ತು ಸಿಗಲಿ ಎಂಬು ದಾಗಿ ದೇವರಲ್ಲಿ ನಾವೆಲ್ಲ ಪ್ರಾರ್ಥಿಸಿದ್ದೇವೆ’ ಎಂದು ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಟಿ.ಹಿರಿಯಣ್ಣ ಕಿದಿ ಯೂರು, ಉಡುಪಿ ಮೀನುಗಾರಿಕೆ ಇಲಾಖೆಯ ಶಿವಕುಮಾರ್, ಉದ್ಯಮಿ ಜೆರ್ರಿ ವಿನ್ಸೆಂಟ್, ಗೋಪಾಲ ಆರ್.ಕೆ., ಗುಂಡು ಅಮೀನ್, ಹಿರಿಯಪ್ಪ ಕೋಟ್ಯಾನ್, ರಮೇಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News