ಕೋಟೆಕಾರ್: ಪೊಸೋಟ್ ತಂಙಳ್ ಉರೂಸ್ ಪ್ರಚಾರ ಸಭೆ
Update: 2018-08-26 20:22 IST
ಕೋಟೆಕಾರ್, ಆ.26: ಸೈಯದ್ ಉಮರುಲ್ ಫಾರೂಕ್ ಅಲ್ ಬುಖಾರಿ ಉರೂಸ್ (ಪೊಸೋಟ್ ತಂಙಳ್)ಕಾರ್ಯಕ್ರಮವು ಆ. 27ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಇದರ ಪ್ರಚಾರ ಕಾರ್ಯ ಮತ್ತು ಪೊಸೋಟ್ ತಂಙಳ್ ಅನುಸ್ಮರಣೆ ಕಾರ್ಯವು ಕೋಟೆಕಾರ್ ಮಲ್‌ಹರ್ ನಗರದ ಮರ್ಕಝುಲ್ ಹಿದಾಯ ವಿದ್ಯಾಸಂಸ್ಥೆಯಲ್ಲಿ ಜರುಗಿತು.
ಸೈಯದ್ ಅಲವಿ ತಂಙಳ್ ಕಿನ್ಯ ದುಆಗೈದರು. ಜಾಮಿಯಾ ಸಅದಿಯ್ಯದ ಪ್ರೊಫೆಸರ್ ಮುಹಮ್ಮದ್ ಸ್ವಾಲಿಹ್ ಉಸ್ತಾದ್ ತಳಿಪರಂಬ ಪ್ರವಚಣಗೈದರು. ಮಲ್ಹರ್ ಸಂಸ್ಥೆಯ ಮ್ಯಾನೇಜರ್ ಹಸನ್ ಕುಂಞಿ, ಕರ್ನಾಟಕ ಪ್ರಚಾರ ಸಮಿತಿಯ ಇಸ್ಹಾಕ್ ಝುಹ್ರಿ, ಎಸ್‌ಎಂಎ ವಲಯಾಧ್ಯಕ್ಷ ಬಾವುಚ್ಚ ಪಂಜಾಲ, ಅಬ್ದುರ್ರಹೀಂ ಕೆ.ಎಂ., ಫಾರೂಕ್ ಕಾಜೂರ್ ಉಪಸ್ಥಿತರಿದ್ದರು.
ವಿದ್ಯಾಸಂಸ್ಥೆಯ ಸಂಚಾಲಕ ಎನ್.ಎಸ್. ಉಮರ್ ಮಾಸ್ಟರ್ ಸ್ವಾಗತಿಸಿದರು.