×
Ad

ಮಂಗಳೂರು: ಎಸ್‌ಡಿಪಿಐ ಮುಖಂಡರಿಂದ ಧಾರ್ಮಿಕ ನಾಯಕರ ಭೇಟಿ

Update: 2018-08-26 20:24 IST

ಮಂಗಳೂರು, ಆ.26: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆಯ ನೇತೃತ್ವದಲ್ಲಿ ಸಾಮಾಜಿಕ ಬದಲಾವಣೆ, ಧಾರ್ಮಿಕ ಸೌಹಾರ್ದ ಮತ್ತು ಧನಾತ್ಮಕ ರಾಜಕೀಯದ ಬಗ್ಗೆ ಸಮಾಲೋಚನೆ ನಡೆಸುವ ಸಲುವಾಗಿ ವಿವಿಧ ಗಣ್ಯರ ಭೇಟಿ ಕಾರ್ಯಕ್ರಮವು ಶನಿವಾರ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಗುರುವಾಯನಕೆರೆ ಮಸೀದಿಯ ಖತೀಬ್ ಸೈಯದ್ ಸಾದಾತ್ ತಂಙಳ್ ಮತ್ತು ಬೆಳ್ತಂಗಡಿ ಪ್ರಾಂತ ಕ್ರೈಸ್ತ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಾಯಿತು.

ಈ ಸಂದರ್ಭ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸೊ ಫ್ರಾಂಕೊ, ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಜೋಯ್ ಅರಕ್ಕಲ್, ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಮೈಸೂರು ಜಿಲ್ಲಾ ಮುಖಂಡ ಪ್ರಸನ್ನ ಚಕ್ರವರ್ತಿ, ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಉಪಾಧ್ಯಕ್ಷ ಪಿ.ಡಿ ಆಂಟನಿ, ಸಮಿತಿ ಸದಸ್ಯ ಅಕ್ಬರ್ ಬೆಳ್ತಂಗಡಿ, ಬೆಳ್ತಂಗಡಿ ಕ್ಷೇತ್ರ ಸಮಿತಿಯ ಅಧ್ಯಕ್ಷ ನವಾಝ್ ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News