×
Ad

ಕೊಡಂಗಾಯಿ ಚಾಂಪಿಯನ್ ಲೀಗ್ ವತಿಯಿಂದ ಕೇರಳ ಸಂತ್ರಸ್ತರಿಗೆ ನೆರವು

Update: 2018-08-26 20:43 IST

ಬಂಟ್ವಾಳ, ಆ. 26: ವಿಟ್ಲ ಪಡ್ನೂರು ಕೊಡಂಗಾಯಿ ಚಾಂಪಿಯನ್ ಲೀಗ್ ವತಿಯಿಂದ ಸೌದಿ ಅರೇಬಿಯಾ ತ್ವಾಯಿಫ್ ಫೈಟರ್ಸ್ ಹೆಲ್ಪ್ ಲೈನ್ ಸಹಕಾರದಲ್ಲಿ ಕೇರಳದ ನೆರೆ ಸಂತ್ರಸ್ತರಿಗೆ ಸಾಮಗ್ರಿಗಳ ನೆರವು ನೀಡಲಾಯಿತು.

ಆಹಾರ ಸಾಮಗ್ರಿ ಹಾಗೂ ಬಟ್ಟೆಬರೆಗಳನ್ನು ಸ್ಥಳೀಯ ಜಮಾಅತ್ ಖತೀಬ್ ಅಬೂಬಕರ್ ಮುಸ್ಲಿಯಾರ್ ಅವರು ದುವಾ ಮಾಡುವ ಮೂಲಕ ಕೇರಳಕ್ಕೆ ಕಳುಹಿಸಿ ಕೊಟ್ಟರು. ಈ ಸಂದರ್ಭ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ, ಹಮೀದ್ ಟಿ, ರಝಾಕ್ ಎಂ.ಕೆ, ಅಝರುದ್ದೀನ್, ಹಾರೀಸ್, ಮಜೀದ್, ಇಬ್ರಾಹಿಂ ಮೂರ್ಜೆಬೆಟ್ಟು, ಸಲೀಂ ಪರ್ತಿಪ್ಪಾಡಿ, ತಾಜು ಟಿಪ್ಪುನಗರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News