×
Ad

ಪಡುಬಿದ್ರೆ: ಮತ್ಸ್ಯ ಸಮೃದ್ಧಿಗಾಗಿ ಸಮುದ್ರ ಪೂಜೆ

Update: 2018-08-26 21:24 IST

ಪಡುಬಿದ್ರೆ, ಆ. 26: ಮತ್ಸ್ಯ ಸಮೃದ್ಧಿಗಾಗಿ ಹಾಲೆರುವ ಮೂಲಕ ಸಮುದ್ರ ಪೂಜೆ ಪಡುಬಿದ್ರೆ, ಹೆಜಮಾಡಿಯಲ್ಲಿ ಭಾನುವಾರ ನಡೆಯಿತು.

ಹೆಜಮಾಡಿ ಏಳೂರು ಮೊಗವೀರ ಸಭಾ ವತಿಯಿಂದ ಹೆಜಮಾಡಿಯ ಅಮವಾಸ್ಯೆ ಕರಿಯ ಬಳಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಪಡುಬಿದ್ರೆ, ನಡಿಪಟ್ಣ, ಕಾಡಿಪಟ್ಣದಲ್ಲೂ ಪೂಜೆ ನರವೇರಿತು.

ಏಳೂರು ಮೊಗವೀರ ಸಭಾ ಅಧ್ಯಕ್ಷ ಸದಾಶಿವ ಕೋಟ್ಯಾನ್, ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ, ಗುಂಡಿ ಮೊಗವೀರ ಸಭಾ ಅಧ್ಯಕ್ಷ ಲೋಕನಾಥ ಗುರಿಕಾರ, ಪಲಿಮಾರು ಮೊಗವೀರ ಸಭಾ ಅಧ್ಯಕ್ಷ ಸುಧಾಕರ ಕೋಟ್ಯಾನ್, ಹೆಜಮಾಡಿ ಮೊಗವೀರ ಸಭಾ ಅಧ್ಯಕ್ಷ ರವಿ ಕುಂದರ್, ಮಟ್ಟು ಮೊಗವೀರ ಸಭಾದ ನಾರಾಯಣ ಮೆಂಡನ್, ಕನ್ನಂಗಾರು ಮೊಗವೀರ ಸಭಾ ಅಧ್ಯಕ್ಷ ಕುಮಾರ್ ಕುಂದರ್, ಸಣ್ಣಗುಂಡಿ ಮೊಗವೀರ ಸಭಾ ಅಧ್ಯಕ್ಷ ವಿಠಲ ಪುತ್ರನ್, ಆಚೆಮಟ್ಟು ಮೊಗವೀರ ಸಭಾ ಅಧ್ಯಕ್ಷ ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News