ಹೊಳೆಗೆ ಬಿದ್ದು ಯುವಕ ಮೃತ್ಯು
Update: 2018-08-26 23:06 IST
ಕುಂದಾಪುರ, ಆ.26: ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಯುವಕನೋರ್ವ ಆಕಸ್ಮಿಕವಾಗಿ ಆಯ ತಪ್ಪಿಹೊಳೆಗೆ ಬಿದ್ದು ಮೃತಪಟ್ಟ ಘಟನೆ ಹೆಮ್ಮಾಡಿ ಸಮೀಪದ ಕನ್ನಡಕುದ್ರು ಎಂಬಲ್ಲಿ ಶನಿವಾರ ಸಂಜೆ ವೇಳೆ ನಡೆದಿದೆ.
ಮೃತರನ್ನು ಹೆಮ್ಮಾಡಿಯ ಸಂತೋಷನಗರ ನಿವಾಸಿ ಅಮೀರ್ ಜಾನ್ ಎಂಬವರ ಮಗ ಮುಹಮ್ಮದ್ ನಬಿ(27) ಎಂದು ಗುರುತಿಸಲಾಗಿದೆ. ಇವರು ಮಧ್ಯಾಹ್ನ ಎರಡು ಗಂಟೆಗೆ ಮನೆಯಿಂದ ಮೀನು ಹಿಡಿಯಲೆಂದು ಹೋಗಿದ್ದು, ಕನ್ನಡ ಕುದ್ರು ಸೇತುವೆ ಬಳಿ ಬೈಕ್ ನಿಲ್ಲಿಸಿ ಮೀನು ಹಿಡಿಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು.
ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದು, ಆ.26ರಂದು ಬೆಳಗ್ಗೆ 8 ಗಂಟೆಗೆ ಮೃತದೇಹ ಹೊಳೆ ಯಲ್ಲಿ ಪತ್ತೆಯಾಯಿತು. ಈ ಬಗ್ಗೆ ಕುಂದಾಪುರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.