×
Ad

ಬಿ.ಸಿ.ರೋಡು: ಎಲ್ಲೆಸಿ ನಿವೃತ್ತ ಆಡಳಿತಾಧಿಕಾರಿಗೆ ಸನ್ಮಾನ

Update: 2018-08-26 23:10 IST

ಬಂಟ್ವಾಳ, ಆ. 26: ಸರಕಾರಿ ಮತ್ತು ಸರಕಾರೇತರ ಸಂಸ್ಥೆಯಲ್ಲಿ ಜನಪರ ಮತ್ತು ಜನಸ್ನೇಹಿ ಅಧಿಕಾರಿಗಳನ್ನು ಅಲ್ಲಿನ ಸಿಬ್ಬಂದಿ ಮತ್ತು ಗ್ರಾಹಕರು ಎಂದಿಗೂ ನೆನಪಿನಲ್ಲಿ ಉಳಿಸಿಕೊಳ್ಳುತ್ತಾರೆ. ಇದರಿಂದಾಗಿ ಸರಕಾರ ಮತ್ತು ಸರಕಾರೇತರ ಸಂಘ ಸಂಸ್ಥೆಗಳ ಅಭಿನಂದನೆ ಜೊತೆಗೆ ಪುಣ್ಯ ಪ್ರಾಪ್ತಿಯೂ ಲಭ್ಯವಾಗುತ್ತದೆ ಎಂದು ಸಂಚಯಗಿರಿ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ.ಕೆ.ತುಕಾರಾಮ ಪೂಜಾರಿ ಹೇಳಿದ್ದಾರೆ.

ತಾಲೂಕಿನ ಬಿ.ಸಿ.ರೋಡು ಎಲ್ಲೆಸಿ ಸ್ಪೋರ್ಟ್ಸ್ ಮತ್ತು ರಿಕ್ರಿಯೇಶನ್ ಕ್ಲಬ್‌ನ ವತಿಯಿಂದ ರವಿವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಇಲ್ಲಿನ ಶಾಖೆಯಲ್ಲಿ 33 ವರ್ಷ ಆಡಳಿತಾಧಿಕಾರಿಯಾಗಿ ದುಡಿದು ನಿವೃತ್ತಿಗೊಂಡ ಸಂಪಿಲ ರಾಮಯ್ಯ ಶೆಟ್ಟಿ ಇವರಿಗೆ ಪತ್ನಿ ಸುಧಾಲಕ್ಷ್ಮಿ ಸಹಿತ ಸನ್ಮಾನಿಸಿ ಅವರು ಮಾತನಾಡಿದರು.

ಶಾಖಾಧಿಕಾರಿ ಪ್ರೇಮನಾಥ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಆಡಳಿತ ವ್ಯವಸ್ಥಾಪಕ ಶಶಿಕುಮಾರ್, ನಿವೃತ್ತ ಶಾಖಾಧಿಕಾರಿ ಪಿ.ಎಲ್.ಉಪಾಧ್ಯಾಯ, ನಿವೃತ್ತ ಅಭಿವೃದ್ಧಿ ಅಧಿಕಾರಿ ಎಂ.ಜಿ.ಹೆಗ್ಡೆ ಬೆಳ್ತಂಗಡಿ, ಎನ್‌ಎಸ್.ಹೆಗ್ಡೆ, ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಡಾ.ವಸಂತ ಬಾಳಿಗಾ, ಅಧ್ಯಕ್ಷ ಸುಧಾಕರ ಆಚಾರ್ಯ, ಹಿರಿಯ ಪ್ರತಿನಿಧಿ ಬಿ.ವಸಂತ ಪ್ರಭು ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು.

ಹಿರಿಯ ಅಭಿವೃದ್ಧಿ ಅಧಿಕಾರಿ ಗೋಕುಲ್ ಶೇಠ್ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಮಧ್ವರಾಜ ಬಿ.ಕಲ್ಮಾಡಿ ವಂದಿಸಿದರು. ನಂದಕುಮಾರಿ ಸನ್ಮಾನ ಪತ್ರ ವಾಚಿಸಿದರು. ಅಭಿವೃದ್ಧಿ ಅಧಿಕಾರಿ ದಿನೇಶ್ ಮಾಮೇಶ್ವರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News