ಸಾಕ್ಷಿಯ ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ಕಾರಣ ನಿರ್ಧರಿಸಲು ಸಾಧ್ಯವಾಗಿಲ್ಲ: ಪೊಲೀಸರ ಹೇಳಿಕೆ

Update: 2018-08-26 18:13 GMT

ಲಕ್ನೋ, ಆ. 26: ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಂದೆಯ ಹತ್ಯೆಯ ಪ್ರಧಾನ ಸಾಕ್ಷಿಯಾಗಿರುವ ಯೂನುಸ್‌ರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾವಿಗೆ ಕಾರಣ ನಿರ್ಧರಿಸಲು ಸಾಧ್ಯವಾಗಿಲ್ಲ ಎಂದು ಉತ್ತರಪ್ರದೇಶ ಪೊಲೀಸರು ರವಿವಾರ ತಿಳಿಸಿದ್ದಾರೆ.

‘‘ಸಾವಿನ ಕಾರಣ ಖಚಿತಪಡಿಸಿಕೊಳ್ಳಲು ಸಾಧ್ಯ ವಾಗಿಲ್ಲ ಎಂದು ಮರಣೋತ್ತರ ವರದಿ ಸ್ಪಷ್ಟವಾಗಿ ಹೇಳಿದೆ’’ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಸುವ್ಯವಸ್ಥೆ) ಆನಂದ್ ಕುಮಾರ್ ಹೇಳಿದ್ದಾರೆ.

ಹಿಸ್ಟೋಪಾಥೋಲಜಿ ಹಾಗೂ ರಾಸಾಯನಿಕ ಪರೀಕ್ಷೆಗಳಿಗೆ ಒಳಾಂಗಗಳ ಸಂರಕ್ಷಿಸಿ ಇಡುವ ಅಗತ್ಯತೆ ಇದೆ. ಇದಲ್ಲದೆ, ದೇಹದ ಒಳಗಡೆ ಸಾವಿಗೆ ಕಾರಣವಾಗುವ ಗಾಯಗಳಿಲ್ಲ ಎಂದು ಮರಣೋ ತ್ತರ ಪರೀಕ್ಷೆಯ ವರದಿ ಉಲ್ಲೇಖಿಸಿದೆ ಎಂದು ಅವರು ತಿಳಿಸಿದ್ದಾರೆ. ಶನಿವಾರ ಪೊಲೀಸರು ಮರಣೋತ್ತರ ಪರೀಕ್ಷೆಗೆಗೆ ಯೂನುಸ್‌ರ ದಫನ ಮಾಡಿದ ಮೃತದೇಹವನ್ನು ಹೊರ ತೆಗೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News