×
Ad

ಉಡುಪಿ: ಮಕ್ಕಳ ನಾಟಕ ‘ಮಾರಿಕಳೆ’ ಉದ್ಘಾಟನೆ

Update: 2018-08-27 21:21 IST

 ಉಡುಪಿ, ಆ.27: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಿಣ್ಣರ ಚಿಲುಮೆ ಮಕ್ಕಳ ನಾಟಕ ಯೋಜನೆಯ ಅಂಗವಾಗಿ ಉಡುಪಿ ರಂಗಭೂಮಿ ಅರ್ಪಿಸುವ 53ನೇ ವರ್ಷದ ಮಕ್ಕಳ ನಾಟಕ ‘ಮಾರಿಕಳೆ’ ಇದರ ಉದ್ಘಾಟನಾ ಸಮಾರಂಭ ಸೋಮವಾರ ಸಂಜೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿತು.

ನಾಟಕವನ್ನು ಉದ್ಘಾಟಿಸಿದ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಮಾತನಾಡಿ, ಮಕ್ಕಳನ್ನು ರಂಗ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವುದರಿಂದ ಸೂಕ್ಷ್ಮತೆ, ಸಂವೇದನಾ ಶೀಲತೆ, ಸಂವಹನ ಕಲೆಯನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್.ಶಾಂತಾರಾಮ್, ಉಡುಪಿ ರೋಟರಿ ಕ್ಲಬ್‌ನ ಚಂದ್ರಶೇಖರ ಅಡಿಗ, ತಜ್ಞ ವೈದ್ಯ ಡಾ.ಸುರೇಶ್ ಶೆಣೈ, ಉದ್ಯಮಿ ವಿಶ್ವನಾಥ್ ಶೆಣೈ, ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ್ ಮುಖ್ಯ ಅತಿಥಿಗಳಾಗಿದ್ದರು.

ವೇದಿಕೆಯಲ್ಲಿ ನಾಟಕದ ನಿರ್ದೇಶಕ ರವಿರಾಜ್ ಎಚ್.ಪಿ., ರಂಗಭೂಮಿ ಉಪಾಧ್ಯಕ್ಷ ನಂದಕುಮಾರ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿದರು. ಬಳಿಕ ಮಾರಿಕಳೆ ನಾಟಕ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News