ಪಿ.ಕೆ. ಗಣೇಶ್ ರಿಗೆ ಯುಎಸ್‍ಎ ತಮಿಳು ವಿವಿ ಡಾಕ್ಟರೇಟ್ ಪದವಿ
Update: 2018-08-27 22:08 IST
ಪುತ್ತೂರು, ಆ. 27: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನಿತ್ಯ ಸ್ಯಾಕ್ಸೋಫೋನ್ ವಾದಕ ವಿದ್ವಾನ್ ಪಿ.ಕೆ. ಗಣೇಶ್ ಅವರಿಗೆ ಅಮೇರಿಕಾ ಅಂತಾರಾಷ್ಟ್ರೀಯ ತಮಿಳು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇಂಟರ್‍ನ್ಯಾಷನಲ್ ತಮಿಳ್ ಯುನಿವರ್ಸಿಟಿ ಯುಎಸ್‍ಎ ವತಿಯಿಂದ ಮದ್ರಾಸ್ ಟಿ.ಟಿ.ಕೆ ಶಾಲೈ ರಾಯಪೇಟೆಯಲ್ಲಿರುವ ಮ್ಯೂಸಿಕ್ ಅಕಾಡಮಿಯಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.