ಕೇರಳ ನೆರೆಯಿಂದ 45,000 ಹೆ.ಪ್ರದೇಶದಲ್ಲಿ ಬೆಳೆ ಹಾನಿ:ಕೇಂದ್ರ

Update: 2018-08-27 17:35 GMT

ಹೊಸದಿಲ್ಲಿ,ಆ.27: ಕೇರಳದಲ್ಲಿ ನೆರೆಯಿಂದಾಗಿ 45,000 ಹೆಕ್ಟರ್ ವಿಸ್ತೀರ್ಣದ ಪ್ರದೇಶಗಳಲ್ಲಿಯ ಭತ್ತ,ಬಾಳೆ,ಸಂಬಾರ ಪದಾರ್ಥಗಳು ಮತ್ತು ಇತರ ಬೆಳೆಗಳಿಗೆ ಹಾನಿಯುಂಟಾಗಿದೆ ಎಂದು ಕೇಂದ್ರ ಕೃಷಿ ಕಾರ್ಯದರ್ಶಿ ಶೋಭನ ಕೆ.ಪಟ್ಟನಾಯಕ್ ಅವರು ಸೋಮವಾರ ಇಲ್ಲಿ ತಿಳಿಸಿದರು.

ಬೆಳೆಗಾರರಿಗೆ ಪರಿಹಾರವನ್ನು ಒದಗಿಸಲು ಕೇಂದ್ರದಿಂದ ಆರ್ಥಿಕ ನೆರವು ಪಡೆಯಲು ವಿವರವಾದ ಪ್ರಸ್ತಾವವನ್ನು ಸಲ್ಲಿಸುವಂತೆ ಕೇರಳ ರಾಜ್ಯ ಸರಕಾರಕ್ಕೆ ಸೂಚಿಸಲಾಗಿದೆ ಎಂದರು.

 45,000 ಹೆ.ವಿಸ್ತೀರ್ಣದ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ರಾಜ್ಯವು ಅಂದಾಜಿಸಿದೆ. ನಾವೂ ಅಂತಹುದೇ ವರದಿಯನ್ನು ಸ್ವೀಕರಿಸಿದ್ದೇವೆ. ಕೇರಳದಲ್ಲಿ ಬೆಳೆಗಳಿಗಿಂತ ಮನೆಗಳು ಮತ್ತು ಇತರ ಮೂಲಸೌಕರ್ಯಗಳಿಗೆ ಹೆಚ್ಚಿನ ಹಾನಿಯುಂಟಾಗಿದೆ ಎಂದರು.

20,000 ಹೆಕ್ಟರ್ ಪ್ರದೇಶದಲ್ಲಿಯ ಭತ್ತದ ಬೆಳೆ ಮತ್ತು 2,000 ಹೆಕ್ಟೇರ್‌ನಲ್ಲಿಯ ಏಲಕ್ಕಿಯಂತಹ ಸಂಬಾರ ಬೆಳೆಗಳು ಹಾನಿಗೀಡಾಗಿವೆ. ಭಾರೀ ಪ್ರಮಾಣದಲ್ಲಿ ಬಾಳೆ ತೋಟಗಳೂ ನಾಶಗೊಂಡಿವೆ ಎಂದು ಪಟ್ಟನಾಯಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News