×
Ad

ಕೊಡಗು, ಕೇರಳದಲ್ಲಿ ಪ್ರವಾಹ: ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ಪರಿಹಾರ ಸಾಮಗ್ರಿ

Update: 2018-08-27 23:17 IST

ಉಳ್ಳಾಲ, ಆ. 27: ನೊಂದವರಿಗೆ ಸಹಾಯ, ಸಾಂತ್ವಾನ ಹೇಳುವುದು ಮಾನವ ಧರ್ಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟರು.

ಕೊಡಗು, ಕೇರಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಹೆಲ್ಪ್ ಇಂಡಿಯಾ ವತಿಯಿಂದ ದಾನಿಗಳಿಂದ ಸಂಗ್ರಹಿಸಿದ ವಸ್ತುಗಳನ್ನು ರವಾನಿಸುವ ಕಾರ್ಯಕ್ರಮಕ್ಕೆ ರವಿವಾರ ಚಾಲನೆ ನೀಡಿ ಮಾತನಾಡಿದರು. 

ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಎಲ್ಲಾ ಧರ್ಮಿಯರು ಒಗ್ಗಟ್ಟು ಕಾಪಾಡಿಕೊಳ್ಳುವ ಮೂಲಕ ಸೌಹಾರ್ದ ವಾತಾವರಣ ಸೃಷ್ಟಿಯಾಗಿದೆ ಇದು ನಿರಂತರ ವಾಗಿರಲಿ. ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಸಂದರ್ಭ ಹೆಲ್ಪ್ ಇಂಡಿಯಾ ಫೌಂಡೇಶನ್ ಗುಣಮಟ್ಟಕ್ಕೆ ಆದ್ಯತೆ ನೀಡಿದೆ ಎಂದು ಹೇಳಿದರು. 

ಹೆಲ್ಪ್ ಇಂಡಿಯಾ ಫೌಂಡೇಶನ್‍ನ ಸ್ಥಾಪಕ ರಾಝಿಕ್ ಉಳ್ಳಾಲ್ ಅವರು ಕೇವಲ ಸಾಮಾಜಿಕ ಜಾಲತಾಣದಲ್ಲಿ ಹತ್ತು ದಿನಗಳ ಹಿಂದೆ ಮನವಿ ಮಾಡಿದ ಮನವಿಗೆ ಜನ ಅದ್ಭುತವಾಗಿ ಸ್ಪಂದಿಸುವ ಮೂಲಕ ವಸ್ತ್ರ, ಆಹಾರ, ಔಷಧಿ ನೀಡಿದ್ದಾರೆ ಎಂದರು.

ಇಎನ್‍ಎನ್ ಸಿಪಿಎಸ್ ಮಂಗಳೂರು ನಗರ ಪೊಲೀಸ್ ನಿರೀಕ್ಷಕ ಕೆ.ಎಂ.ಶರೀಫ್ ಮುಖ್ಯ ಅತಿಥಿಯಾಗಿದ್ದರು.  ಕಾರ್ಯಕ್ರಮದಲ್ಲಿ ಫಾರೂಕ್ ಪಟ್ಲ, ಝಾಕಿರ್ ತುಂಬೆ, ಸಿರಾಜ್, ತೌಸೀಫ್, ತನ್ವೀರ್,  ಜಲೀಲ್, ಶರೀಫ್ ಪಟ್ಲ, ಸುಲೈಮಾನ್, ಕಮಾಲ್, ಅಶ್ರಫ್ ಕೆನರಾ, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News