×
Ad

ಕೋಳಿ ಅಂಕಕ್ಕೆ ಪೊಲೀಸ್ ದಾಳಿ: 8 ಮಂದಿ ಸೆರೆ

Update: 2018-08-27 23:27 IST

ಪುತ್ತೂರು, ಆ. 27: ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ಎಂಬಲ್ಲಿ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಅಂಕಕ್ಕೆ ಸಂಪ್ಯ ಪೊಲೀಸರು ದಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ 8 ಮಂದಿಯನ್ನು ಬಂಧಿಸಿದ್ದಾರೆ.

ಕೆದಂಬಾಡಿ ಗ್ರಾಮದ ಮಿತ್ರಂಪಾಡಿಯಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಸುತ್ತಿದ್ದ ಕುರಿತು ಸಂಪ್ಯ ಠಾಣೆಯ ಬೀಟ್ ಪೊಲೀಸ್ ಹರ್ಷಿತ್ ಎಂಬವರಿಗೆ ಲಭಿಸಿದ ಮಾಹಿತಿಯಂತೆ ರವಿವಾರ ಸಂಜೆ ಸಂಪ್ಯ ಪೊಲೀಸರು ದಾಳಿ ಕಾರ್ಯಾಚರಣೆ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ  ಎಡಮಂಗಲದ ಕೊರಗಪ್ಪ, ಕೆದಂಬಾಡಿ ವ್ಯಾಪ್ತಿಯವರಾದ ಪುನೀತ್, ಮಾಧವ,ಶೇಖರ, ರವಿ, ದಿನೇಶ್, ಸುಂದರ , ಪಾಲ್ತಾಡಿಯ ಜಯರಾಮ ಎಂಬವರನ್ನು ಬಂಧಿಸಿರುವುದಾಗಿ ತಿಳಿಸಿದ್ದು, ಉಮೇಶ್ ಎಂಬಾತ ಪರಾರಿಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ.

ಕೋಳಿ ಅಂಕದಲ್ಲಿದ್ದ 7 ವಿವಿಧ ಜಾತಿಯ ಕೋಳಿಗಳು, 3560 ರೂ. ನಗದು, ಎರಡು ಕೋಳಿ ಬಾಳು, ಎರಡು ಬೈಕ್ ಮತ್ತು ಡಿಯೋ ಸ್ಕೂಟರ್ ಒಂದನ್ನು ವಶಪಡಿಸಿಕೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News