×
Ad

ಕೇರಳ- ಕೊಡಗು ನೆರೆ: ಕೆನರಾ ಕಾಲೇಜಿನಿಂದ ನೆರವು

Update: 2018-08-27 23:42 IST

ಮಂಗಳೂರು, ಆ.27: ಪ್ರಾಕೃತಿಕ ವಿಕೋಪದಿಂದ ತತ್ತರಿಸಿದ ಕೇರಳ ಮತ್ತು ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಕೆನರಾ ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ 63,944 ರೂ.ನ್ನು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಪ್ರೊ.ಸಂಧ್ಯಾ, ಡಾ.ಭುವನಾ, ಪ್ರೊ.ಅನಸೂಯಾ ಹಾಗೂ ಶಿಕ್ಷಕ ಕಾರ್ಯದರ್ಶಿ ಪ್ರೊ. ಪುಷ್ಪಲತಾ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News