×
Ad

ಕಾರ್ಪೊರೇಶನ್ ಬ್ಯಾಂಕ್‌ನಿಂದ ರೈನ್‌ಕೋಟ್ ವಿತರಣೆ

Update: 2018-08-28 23:09 IST

ಮಂಗಳೂರು, ಆ.28: ನಗರದ ಪಾಂಡೇಶ್ವರದಲ್ಲಿನ ಅಗ್ನಿಶಾಮಕ ದಳ ಇಲಾಖೆಯಲ್ಲಿ ಕಾರ್ಪೊರೇಶನ್ ಬ್ಯಾಂಕ್‌ನಿಂದ ರೈನ್‌ಕೋಟ್ ವಿತರಿಸುವ ಕಾರ್ಯಕ್ರಮವನ್ನು ಕಾರ್ಪೊರೇಶನ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೈಕುಮಾರ್ ಗಾರ್ಗ್ ಮಂಗಳವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ 200 ರೈನ್‌ಕೋಟ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಧ್ಯಕ್ಷತೆಯನ್ನು ಅಗ್ನಿಶಾಮಕ ದಳ ಮಂಗಳೂರು ಪ್ರಾಂತದ ಮುಖ್ಯ ಅಧಿಕಾರಿ ಟಿ.ಎನ್.ಶಿವಶಂಕರ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಾರ್ಪೊರೇಶನ್ ಬ್ಯಾಂಕ್‌ನ ಡಿಜಿಎಂ/ಪಿಆರ್‌ಒ ಎಸ್.ಸಥು, ಸಹಾಯಕ ಪ್ರಧಾನ ವ್ಯವಸ್ಥಾಪಕ ಕ್ಯಾ.ಕೆ.ಎಸ್.ನೇಗಿ, ಮುಖ್ಯ ವ್ಯವಸ್ಥಾಪಕರಾದ ಎ.ಕೆ.ಸಿಂಗ್, ಎಸ್.ಸಂತೋಷ್‌ಕುಮಾರ್, ರಾಘವೇಂದ್ರ ಬಿ.ಎಸ್. ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಅಗ್ನಿಶಾಮಕ ದಳ ಇಲಾಖೆಯ ಜಿಲ್ಲಾ ಅಧಿಕಾರಿ ಮುಹಮ್ಮದ್ ಝುಲ್ಫಿಕರ್ ನವಾಝ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News