×
Ad

ಜೆಡಿಎಸ್ ಅಧಿಕಾರಕ್ಕೆ ಬಂದರೆ ಉಳ್ಳಾಲದ ಸಮಗ್ರ ಅಭಿವೃದ್ಧಿ: ನಝೀರ್ ಉಳ್ಳಾಲ್

Update: 2018-08-28 23:12 IST

ಉಳ್ಳಾಲ, ಆ. 28: ಜೆಡಿಎಸ್ ಅಧಿಕಾರಕ್ಕೆ ಬಂದರೆ ವರ್ಷದಲ್ಲೇ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ 24 ಗಂಟೆಯೂ ನೀರು ಪೂರೈಕೆ, ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ವಿಲೇವಾರಿ, ಒಳಚರಂಡಿ ಯೋಜನೆ ಸಮಗ್ರವಾಗಿ ಅನುಷ್ಠಾನ, ಭ್ರಷ್ಟಾಚಾರಮುಕ್ತ ಆಡಳಿತ, ಯುವಜನತೆಗಾಗಿ ಆಟದ ಮೈದಾನ, ನಗರ ಸೌಂದರ್ಯಕ್ಕಾಗಿ ಈಜುಕೊಳ ನಿರ್ಮಾಣ, ಪ್ರಾವಸೋಧ್ಯಮ ಉತ್ತೇಜನಕ್ಕೆ ಬೀಚ್ ಅಭಿವೃದ್ಧಿ ಮುಂತಾದ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲಾಗುವುದು. ರಾಜ್ಯದಲ್ಲಿ ಜೆಡಿಎಸ್ ಮುಖ್ಯಮಂತ್ರಿ ಇರುವುದರಿಂದ ಯೋಜನೆ ತರುವುದು ಸುಲಭವಾಗಲಿದೆ ಎಂದು ಹೇಳಿದರು.

ತೊಕ್ಕೊಟ್ಟುವಿನಲ್ಲಿ ಖಾಸಗಿ ಹೋಟೆಲ್‍ನಲ್ಲಿ ಮಂಗಳವಾರ ನಡೆದ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. 
ನಗರಸಭಾ ಚುನಾವಣೆಯಲ್ಲಿ 21 ವಾರ್ಡ್‍ಗಳಿಂದ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದು ಎಲ್ಲರೂ ವಿದ್ಯಾವಂತರಾಗಿದ್ದಾರೆ, ಹಿಂದಿನ ಅವಧಿಯಲ್ಲಿ ಹೆಬ್ಬೆಟ್ಟುದಾರಿ ಕೌನ್ಸಿಲರ್‍ಗಳಿದ್ದು ಅಂತಹವರ ವಿರುದ್ಧ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸಬೇಕು ಎಂದು ಜೆಡಿಎಸ್ ಮುಖಂಡ ನಝೀರ್ ಉಳ್ಳಾಲ್ ಹೇಳಿದರು. 

ನಗರಸಭೆ ಸದಸ್ಯ ಫಾರೂಕ್ ಯು.ಎಚ್., ಜೆಡಿಎಸ್ ಕ್ಷೇತ್ರಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ ಹರೇಕಳ, ರಾಜ್ಯ ಸಮಿತಿ ಸದಸ್ಯ ಅಬೂಬಕ್ಕರ್ ನಾಟೆಕಲ್ ಹಾಗೂ ಯು.ಕೆ.ಮುಹಮ್ಮದ್ ಮುಸ್ತಫಾ ಉಪಸ್ಥಿತರಿದ್ದರು.

ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿಗಳು

ವಾರ್ಡ್ 2ರಲ್ಲಿ ಹಸೀನಾ ಅಶ್ರಫ್, 4-ಅಶ್ರಫ್ ಬಾವ, 7-ಸಾರಮ್ಮ ಜುಬೇದಾ,  9-ಅಬ್ದುಲ್ ಬಶೀರ್, 10-ಅಬ್ದುಲ್ ಜಬ್ಬಾರ್, 11-ಮೀನಾ ಡಿಸೋಜ, 12-ಸೌಧಾ, 13-ಝಾಕೀರ್ ಹುಸೈನ್, 14-ಗಂಗಾಧರ ಉಳ್ಳಾಲ್, 15-ಲತೀಫ, 17-ಅಶೋಕ್ ರೂಪೇಶ್ ಮೊಂತೆರೋ, 18-ದಿನಕರ ಉಳ್ಳಾಲ್, 21-ರವೀಂದ್ರ, 23-ವೀಣಾ ಡಿಸೋಜ, 24-ಹಂಝ ಸುಂದರೀಭಾಗ್, 25-ಬಶೀರ್ ಇಸ್ಮಾಯಿಲ್, 27-ಖಲೀಲ್, 28-ಸಾಕಿರಾ, 29-ದಿನಕರ್, 30-ಹರಿಣಿ ಬಂಗೇರ ಹಾಗೂ 31-ಸುರೇಖ ಚಂದ್ರಹಾಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News