ಉಡುಪಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಮದ್ಯ ಮಾರಾಟ ನಿಷೇಧ
ಉಡುಪಿ, ಆ. 28: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ ನಗರಸಭೆ, ಪುರಸಭೆ ಕುಂದಾಪುರ ಮತ್ತು ಕಾರ್ಕಳ ಹಾಗೂ ಪಟ್ಟಣ ಪಂಚಾಯತ್ ಸಾಲಿಗ್ರಾಮಗಳ ಎಲ್ಲಾ ವಾರ್ಡುಗಳಿಗೆ ಆ.31ರಂದು ಮತದಾನ ಹಾಗೂ ಸೆ.3ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಆದ್ದರಿಂದ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಉಡುಪಿ ನಗರಸಭೆ, ಪುರಸಭೆ ಕುಂದಾಪುರ, ಕಾರ್ಕಳ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಗಡಿಯಿಂದ 3 ಕಿ.ಮೀ. ಪರಿಧಿಯಲ್ಲಿ ಪಾನ ನಿರೋಧಕ ದಿನವೆಂದು ಘೋಷಿಸಿ ಆದೇಶ ಹೊರಡಿಸ ಲಾಗಿದೆ. ಈ ದಿನಗಳಲ್ಲಿ ಯಾವುದೇ ಹೊಟೇಲ್‌ಗಳಲ್ಲಿ, ಕ್ಲಬ್‌ಗಳಲ್ಲಿ, ಮದ್ಯ ಮಾರಾಟ/ಸರಬರಾಜು ಮಾಡುವುದನ್ನು ನಿಷೇಧಿಸಲಾಗಿದೆ.
ಆ ಪ್ರಯುಕ್ತ ಆ.30ರ ಬೆಳಗ್ಗೆ 6 ರಿಂದ ಆ.31ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಸೆ.3ರಂದು ಬೆಳಗ್ಗೆ 6 ರಿಂದ ಮದ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪ್ರಿಯಾಂಕ ವೆುೀರಿ ಫ್ರಾನಿಸ್ ಆದೇಶ ಹೊರಡಿಸಿದ್ದಾರೆ.