ಯಶಸ್ವಿ ಜೀವನಕ್ಕೆ ಕೌಶಲ್ಯಾಧಾರಿತ ಶಿಕ್ಷಣ ಸಹಕಾರಿ: ಗಿಲ್ಬರ್ಟ್ ಡಿಸೋಜ

Update: 2018-08-29 13:24 GMT

ಬ್ರಹ್ಮಾವರ, ಆ.29: ಕೌಶಲ್ಯಾಧಾರಿತ ಶಿಕ್ಷಣವು ವೃತ್ತಿ ಭದ್ರತೆ ಒದಗಿಸುವುದರ ಜೊತೆಗೆ ಯಶಸ್ವಿ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ನಿವೃತ್ತ ಯೋಧ, ಉದ್ಯಾವರ ಸೈಂಟ್ ಮೇರಿಸ್ ಐಟಿಐ ಕಾಲೇಜಿನ ಪ್ರಾಂಶುಪಾಲ ಗಿಲ್ಬರ್ಟ್ ಡಿಸೋಜ ಹೇಳಿದ್ದಾರೆ.

ಗುರುದೇವರ ಮಠದ ಅಂಗ ಸಂಸ್ಥೆಯಾದ ಧರ್ಮಸ್ಥಳ ಶ್ರೀರಾಮಕ್ಷೇತ್ರ ಉಡುಪಿ ಸಮಿತಿ ಎಜ್ಯುಕೇಶನಲ್ ಟ್ರಸ್ಟ್‌ನ ಬಿಲ್ಲಾಡಿಯಲ್ಲಿರುವ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ದೇಶದ ಅಭಿವೃದ್ಧಿಗೆ ಕೈಗಾರಿಕೆಗಳ ಪಾತ್ರ ಮಹತ್ವದ್ದು, ಕೇಂದ್ರ ಸರಕಾರ ಯುವಜನರಿಗೆ ಕೌಶಲ್ಯಾಧರಿತ ಶಿಕ್ಷಣ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಐಟಿಐ ವಿದ್ಯಾರ್ಥಿಗಳಿಗೆ ಭಾರತ ಸರಕಾರ ನೀಡುವ ಎನ್‌ಸಿ ವಿಟಿ ಪ್ರಮಾಣಪತ್ರವು ಜಗತ್ತಿನ 58 ರಾಷ್ಟ್ರಗಳಲ್ಲಿ ಉದ್ಯೋಗವಕಾಶಕ್ಕಾಗಿ ಪರಿ ಗಣಿಸಲ್ಪಡುತ್ತದೆ ಎಂದರು.

ಸ್ಪಷ್ಟವಾದ ಗುರಿ ಇಟ್ಟುಕೊಂಡು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನ ಆರಂಭಿಸಬೇಕು. ಕೌಶಲ್ಯ, ಕ್ರಿಯಾಶೀಲ ಮನೋಭಾವದಿಂದ ತಾಂತ್ರಿಕ ಶಿಕ್ಷಣದಲ್ಲಿ ಯಶಸ್ಸುಗಳಿಸಬಹುದು. ಮೊಬೈಲ್ ದಾಸರಾಗದೆ ಹಿರಿಯರು, ಗುರುಗಳಿಗೆ ಕೃತಜ್ಞರಾಗಿ. ಸ್ಪಷ್ಟ ಗುರಿಯೊಂದಿಗೆ ಸಾಗಿದರೆ ಯಶಸ್ಸು ಸಾಧ್ಯ ಎಂದು ಅವರು ತಿಳಿಸಿದರು.

ಟ್ರಸ್ಟ್‌ನ ಕಾರ್ಯಾಧ್ಯಕ್ಷ, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮಾತನಾಡಿದರು. ಟ್ರಸ್ಟ್‌ನ ಕೋಶಾಧಿಕಾರಿ ಓಬಣ್ಣ ಪೂಜಾರಿ, ಟ್ರಸ್ಟಿ ಶಿವರಾಂ ಪೂಜಾರಿ ಬನ್ನಂಜೆ, ಕೇಂದ್ರದ ಪ್ರಾಂಶುಪಾಲ ನವೀನ್ ಸಾಲ್ಯಾನ್, ಯುವನಟ ಚೇತನ್ ಬಾಪುತೋಟ ಉಪಸ್ಥಿತರಿದ್ದರು. ಉಪನ್ಯಾಸಕ ರಘುವೀರ್ ವಂದಿಸಿ ದರು. ಕಾರ್ಯದರ್ಶಿ ಮಹೇಶ್ ಕುಮಾರ್ ನಿರೂಪಿಸಿರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News