ಕೈಲಾಸ ಮಾನಸ ಸರೋವರ ಯಾತ್ರೆಗೈಯ್ಯಲಿರುವ ರಾಹುಲ್ ಗಾಂಧಿ

Update: 2018-08-29 14:35 GMT

ಹೊಸದಿಲ್ಲಿ, ಆ.29: ತನ್ನನ್ನು ಶಿವಭಕ್ತ ಎಂದು ಹೇಳಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ತಿಂಗಳ ಕೊನೆಯಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಲಿದ್ದಾರೆ. ಮಾನಸ ಸರೋವರ ಯಾತ್ರೆಯು ಶಿವಭಕ್ತರ ಆತ್ಯಂತ ಪವಿತ್ರ ಯಾತ್ರೆಯೆಂದು ಪರಿಗಣಿಸಲ್ಪಟ್ಟಿದೆ.

ಈ ಯಾತ್ರೆಯನ್ನು ಕೈಗೊಳ್ಳುವ ಬಗ್ಗೆ ರಾಹುಲ್ ಗಾಂಧಿ ಎಪ್ರಿಲ್‌ನಲ್ಲಿ ರಾಮಲೀಲಾ ಮೈದಾನದಲ್ಲಿ ನಡೆದ ಜನಾಕ್ರೋಶ ರ್ಯಾಲಿಯ ವೇಳೆ ತಿಳಿಸಿದ್ದರು. ಕರ್ನಾಟಕದಲ್ಲಿ ಚುನಾವಣಾ ಅಭಿಯಾನದ ವೇಳೆ ನಡೆದ ವಿಮಾನ ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ಸಂದರ್ಭದಲ್ಲಿ ಈ ಯಾತ್ರೆಯನ್ನು ಕೈಗೊಳ್ಳಲು ನಿರ್ಧರಿಸಿದೆ ಎಂದು ರಾಹುಲ್ ಅಂದು ತಿಳಿಸಿದ್ದರು. ಅಂದು ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಕೆಲವು ನಿಮಿಷಗಳ ಕಾಲ ರಾಡರ್‌ನಿಂದ ಮರೆಯಾಗಿತ್ತು ಮತ್ತು ಈ ಪರಿಸ್ಥಿತಿಯ ಗಂಭೀರತೆಯನ್ನು ಬಿಜೆಪಿ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ದೂರಿತ್ತು. ಆದರೆ, ರಾಹುಲ್ ಗಾಂದಿ ಮಾನಸ ಸರೋವರ ಯಾತ್ರೆಗೈಯ್ಯಲು ಅರ್ಜಿ ಹಾಕಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ಯಾತ್ರೆಯ ಹಾದಿಯು ಚೀನಾದ ಮೂಲಕ ಹಾದು ಹೋಗುವುದರಿಂದ ಯಾತ್ರಿಗಳು ಮೊದಲೇ ತಮ್ಮ ಹೆಸರನ್ನು ನೋಂದಾಯಿಸುವ ಅಗತ್ಯವಿದೆ. ಈ ಪವಿತ್ರ ಯಾತ್ರೆಯನ್ನು ಆಯೋಜಿಸಲು ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಮತ್ತು ವಿಶೇಷ ಪರವಾನಿಗೆಯುಳ್ಳವರಿಗೂ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News