2019ರಲ್ಲಿ ಚಂದ್ರಯಾನ 2: ಇಸ್ರೋ ಮುಖ್ಯಸ್ಥ

Update: 2018-08-29 14:31 GMT

ಹೊಸದಿಲ್ಲಿ, ಆ.29: ಭಾರತದ ಬಾಹ್ಯಾಕಾಶ ಯೋಜನೆಗಳಲ್ಲೇ ಅತ್ಯಂತ ಸಂಕೀರ್ಣ ಮತ್ತು ಮಹತ್ವದ ಯೋಜನೆಯಾಗಿರುವ ಚಂದ್ರಯಾನ 2ಕ್ಕೆ 2019ರ ಜನವರಿಯಲ್ಲಿ ಚಾಲನೆ ದೊರೆಯಲಿದೆ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್ ಬುಧವಾರ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವನ್, ಈ ಯೋಜನೆಯನ್ನು ಪರಿಣತರ ತಂಡ ಪರಿಶೀಲಿಸಿದ್ದು ಕಕ್ಷೆಗೆ ಪ್ರವೇಶಿಸುವ ಮತ್ತು ರೋವರನ್ನು ಚಂದ್ರನ ಮೇಲೆ ಇಳಿಸುವ ವೇಳೆ ಕೆಲವೊಂದು ಬದಲಾವಣೆಗಳನ್ನು ಮಾಡಲು ಸಲಹೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.  ಇಸ್ರೋ ಈವರೆಗೆ ಕೈಗೊಂಡಿರುವ ಯೋಜನೆಗಳಲ್ಲೇ ಇದು ಅತ್ಯಂತ ಸಂಕೀರ್ಣ ಯೋಜನೆಯಾಗಿದೆ. ಹಾಗಾಗಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಬೇಕೆಂಬ ಆಶಯದಿಂದ ತಜ್ಞರು ಕೆಲವೊಂದು ಬದಲಾವಣೆಗಳನ್ನು ಮಾಡಲು ಸಲಹೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಬದಲಾವಣೆಗಳಿಂದ ಯೋಜನೆಯ ಭಾರ ಕೂಡಾ ಹೆಚ್ಚಿದ್ದು ರೋವರನ್ನು ಜಿಎಸ್‌ಎಲ್‌ವಿ ಮಾರ್ಕ್ 3 ವಾಹನದ ಮೂಲಕ ಹಾರಿಸಲು ನಿರ್ಧರಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News