ವಿದೇಶಿ ಸಾಲ ಪಡೆಯಲು ಮುಂದಾದ ಕೇರಳ ಸರಕಾರ

Update: 2018-08-29 14:33 GMT

ತಿರುವನಂತಪುರ, ಆ.29: ಅನುದಾನದ ರೂಪದಲ್ಲಿ ವಿದೇಶಗಳಿಂದ ಆರ್ಥಿಕ ನೆರವು ಪಡೆಯುವ ತನ್ನ ನಿರ್ಧಾರಕ್ಕೆ ಕೇಂದ್ರದ ಆಕ್ಷೇಪದಿಂದ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ ಕೇರಳ ಸರಕಾರವು ವಿಶ್ವಬ್ಯಾಂಕ್ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ಗಳಂತಹ ಪ್ರಮುಖ ಹಣಕಾಸು ಸಂಸ್ಥೆಗಳಿಂದ ಮೃದು ಸಾಲಗಳನ್ನು ಪಡೆಯಲು ಮುಂದಾಗಿದೆ. ವಿದೇಶಿ ಸಾಲಗಳಿಗೆ ವಿಧಿಸಲಾಗಿರುವ ಒಟ್ಟು ರಾಜ್ಯ ಆಂತರಿಕ ಉತ್ಪನ್ನ(ಜಿಎಸ್‌ಡಿಪಿ)ದ ಶೇ.3ರ ಮಿತಿಯನ್ನು ರಾಜ್ಯದ ಮಟ್ಟಿಗೆ ಶೇ.4.5ಕ್ಕೆ ಹೆಚ್ಚಿಸುವಂತೆ ಅದು ಕೇಂದ್ರವನ್ನು ವಿಧ್ಯುಕ್ತವಾಗಿ ಕೋರಿದೆ.

ವಿಶ್ವಬ್ಯಾಂಕ್‌ನ ತಂಡವೊಂದು ಕೇರಳದಲ್ಲಿದ್ದು,ನೆರೆಯಿಂದ ಆಗಿರುವ ಹಾನಿಯ ಮೌಲ್ಯಮಾಪನದೊಂದಿಗೆ ಸಾಲ ನೀಡಿಕೆ ಪ್ರಕ್ರಿಯೆಗೆ ಚಾಲನೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News