ಹೊಸ ಪಕ್ಷದ ಸ್ಥಾಪನೆಯನ್ನು ಪ್ರಕಟಿಸಿದ ಶಿವಪಾಲ್ ಯಾದವ್

Update: 2018-08-29 14:40 GMT

ಲಕ್ನೋ, ಆ.29: ಸಮಾಜವಾದಿ ಜಾತ್ಯತೀತ ಮೋರ್ಚಾ ಹೆಸರಿನಲ್ಲಿ ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ಬುಧವಾರ ಪ್ರಕಟಿಸಿರುವ ಹಿರಿಯ ಎಸ್‌ಪಿ ನಾಯಕ ಶಿವಪಾಲ್ ಯಾದವ್ ಅವರು, ತನ್ನೊಂದಿಗೆ ಕೈಜೋಡಿಸುವಂತೆ ಎಸ್‌ಪಿ ಮತ್ತು ಇತರ ಜಾತ್ಯತೀತ ಪಕ್ಷಗಳಲ್ಲಿ ಕಡೆಗಣಿಸಲ್ಪಟ್ಟಿರುವ ನಾಯಕರನ್ನು ಆಹ್ವಾನಿಸಿದ್ದಾರೆ. ಈ ಬೆಳವಣಿಗೆ ಯಾದವ್ ಕುಟುಂಬದಲ್ಲಿ ಅಧಿಕಾರಕ್ಕಾಗಿ ಮತ್ತೆ ಕಚ್ಚಾಟಕ್ಕೆ ಕಾರಣವಾಗುವ ನಿರೀಕ್ಷೆಯಿದೆ.

ಪಕ್ಷವು ತನಗೇನಾದರೂ ಹೊಣೆಗಾರಿಕೆಯನ್ನು ನೀಡಬಹುದೆಂದು ಒಂದೂವರೆ ವರ್ಷಗಳಿಂದ ಕಾಯುತ್ತಿದ್ದೇನೆ. ಈ ಕಡೆಗಣನೆಯನ್ನು ಇನ್ನೂ ಸಹಿಸಲು ಸಾಧ್ಯವಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್ ಹೇಳಿದರು.

ಬೆಳಿಗ್ಗೆ ನೂತನ ಪಕ್ಷದ ಸ್ಥಾಪನೆಯನ್ನು ಪ್ರಕಟಿಸುವ ಮುನ್ನ ಅವರು ತನ್ನ ಹಿರಿಯ ಸೋದರ ಮುಲಾಯಂ ಸಿಂಗ್ ಯಾದವ್ ರನ್ನು ಭೇಟಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News