ನಿಟ್ಟೆಯಲ್ಲಿ ರಾ.ತರಬೇತಿ ಕಾರ್ಯಕ್ರಮ

Update: 2018-08-29 15:59 GMT

ನಿಟ್ಟೆ, ಆ. 29: ನಿಟ್ಟೆಯ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಜೈಪುರದ ನೇಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಮಾರ್ಕೆಟಿಂಗ್‌ನ ಸಹಯೋಗದೊಂದಿಗೆ ‘ಕೃಷಿ ಉದ್ಯಮಕ್ಕೆ ಡಿಜಿಟಲ್ ಮಾರ್ಕೆಟಿಂಗ್’ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ತರಬೇತಿ ಕಾರ್ಯಕ್ರಮವನ್ನು ಸೆ.25, 26ರಂದು ಆಯೋಜಿಸಿದೆ.

ಕೃಷಿ ಆಧಾರಿತ ಉದ್ಯಮದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕುರಿತು ಅರಿವು ಮೂಡಿಸುವುದು ಈ ತರಬೇತಿಯ ಉದ್ದೇಶವಾಗಿದೆ. ತರಬೇತಿಗೆ ಯಾವುದೇ ನೊಂದಾವಣಿ ಶುಲ್ಕವಿಲ್ಲ. ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಡೀನ್ (ಕಾರ್ಪೋರೇಟ್ ಪ್ರೋಗ್ರಾಮ್) ಡಾ.ಎ.ಪಿ.ಆಚಾರ್‌ರನ್ನು (+91 9945797197) ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News