ವಿದ್ಯಾರ್ಥಿನಿ ಫ್ಲಾಟ್‌ಗೆ ನುಗ್ಗಿ ಸೊತ್ತು ಕಳವು

Update: 2018-08-29 16:06 GMT

ಮಣಿಪಾಲ, ಆ.29: ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆಯ  ರೆಸಿಡೆನ್ಸಿ ಫ್ಲಾಟ್‌ಗೆ ಆ. 26ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ವಿದ್ಯಾರ್ಥಿನಿ ಹರ್ಷಿತ ಎಚ್. ಎಂಬವರ ಫ್ಲಾಟ್ ನುಗ್ಗಿದ ಕಳ್ಳರು ಗೋದ್ರೇಜ್ ಕಪಾಟಿ ನಲ್ಲಿದ್ದ ಎರಡು ಲ್ಯಾಪ್‌ಟಾಪ್, ಐಫೋನ್ ವಾಚ್, 7000 ರೂ. ನಗದು ಕಳವು ಮಾಡಿದ್ದಾರೆಂದು ತಿಳಿದುಬಂದಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1,09,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News