ಮಾನವ ಹಕ್ಕು ಹೋರಾಟಗಾರರ ಬಂಧನ ಫ್ಯಾಸಿಸ್ಟ್ ಧೋರಣೆ: ಪಿಯುಸಿಎಲ್ ಖಂಡನೆ

Update: 2018-08-29 16:10 GMT

ಮಂಗಳೂರು, ಆ. 29: ಮುಂಬೈ, ರಾಂಚಿ, ಹೈದರಾಬಾದ್, ದಿಲ್ಲಿ ಫರೀದಾಬಾದ್ ಹಾಗೂ ಗೋವಾದಲ್ಲಿ ಹಲವು ಮಾನವ ಹಕ್ಕುಗಳ ಕಾರ್ಯಕರ್ತರ ಮೇಲೆ ಪೊಲೀಸ್ ತಂಡಗಳು ಮಂಗಳವಾರ ಏಕಕಾಲದಲ್ಲಿ ನಡೆಸಿರುವ ದಾಳಿ ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆಹಾಗೂ ಫ್ಯಾಸಿಸ್ಟ್ ಧೋರಣೆಯ ಪ್ರತೀಕವಾಗಿದೆ ಎಂದು ಮಾನವ ಹಕ್ಕುಗಳಿಗಾಗಿ ಜನಪರ ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಘಟನೆಯನ್ನು ತೀವ್ರವಾಗಿ ಖಂಡಿಸಿದೆ.

ಈ ಪ್ರಕರಣದಲ್ಲಿ ನ್ಯಾಯಾಂಗ ಮಧ್ಯೆಪ್ರವೇಶಿಸಬೇಕು ಎಂದು ಆಗ್ರಹಿಸಿದೆ. ದೇಶದಲ್ಲಿ ದಲಿತರ , ಆದಿವಾಸಿಗಳ ಬುಡಕಟ್ಟುಜನರ ಹಾಗೂ ಸಮಾಜದಲ್ಲಿ ಮಾನವ ಹಕ್ಕಗಳಿಗಾಗಿ ಹೋರಾಡುತ್ತಿರುವ ವ್ಯಕ್ತಿಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಈ ರೀತಿ ಕಾನೂನು ಬಾಹಿರವಾಗಿ ಬಂಧಿಸಿರುವ ಕ್ರಮ ಸಂವಿಧಾನ ವಿರೋಧಿ ಕ್ರಮವಾಗಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಎಲ್ಲಾ ನಾಗರಿಕರು ಈ ಕೃತ್ಯವನ್ನು ಖಂಡಿಸಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಿಯುಸಿಎಲ್‌ನ ಅಧ್ಯಕ್ಷ ಕಬೀರ್ ಉಳ್ಳಾಲ್ ಹಾಗೂ ಕಾರ್ಯದರ್ಶಿ ಕಿಶೋರ್ ಅತ್ತಾವರ ಪ್ರಕಟಣೆಯಲ್ಲಿ ಘಟನೆಯನ್ನು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News