×
Ad

ಹಿದಾಯ ಫೌಂಡೇಶನ್: ನೂತನ ಕೇಂದ್ರೀಯ ಸಮಿತಿ ರಚನೆ; ಅಧ್ಯಕ್ಷರಾಗಿ ಮುಹಮ್ಮದ್ ಹನೀಫ್

Update: 2018-08-29 21:48 IST
ಆಬಿದ್ ಅಸ್ಗರ್

ಬಂಟ್ವಾಳ, ಆ. 29: ಹಿದಾಯ ಫೌಂಡೇಶನ್ ಮಂಗಳೂರು ಇದರ ಕೇಂದ್ರೀಯ ಸಮಿತಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಕ ಅಧ್ಯಕ್ಷ ಎಚ್.ಕೆ.ಖಾಸಿಂ ಅಹ್ಮದ್ ಅವರ ಉಪಸ್ಥಿಯಲ್ಲಿ ನೂತನ ಪಧಾದಿಕಾರಿಗಳ ಆಯ್ಕೆ ಪಕ್ರಿಯೆಯು ಮಂಗಳೂರು ಹಿದಾಯ ಫೌಂಡೇಶನ್ ಕಚೇರಿಯಲ್ಲಿ ಜರಗಿತು.

ಅಧ್ಯಕ್ಷರಾಗಿ ಮಹಮ್ಮದ್ ಹನೀಫ್, ಉಪಾಧ್ಯಕ್ಷರಾಗಿ ಆಸಿಫ್ ಇಕ್ಬಾಲ್, ಎಸ್.ಎಂ. ಹಸನ್, ಪ್ರಧಾನ ಕಾರ್ಯದರ್ಶಿಯಾಗಿ ಆಬಿದ್ ಅಸ್ಗರ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಅನಂತಾಡಿ, ಕೋಶಾಧಿಕಾರಿಯಾಗಿ ಝೀಯಾವುದ್ದಿನ್, ಘಟಕ ಸಂಯೋಜಕರಾಗಿ ಆಸಿಫ್ ಡಿಲ್ಸ್, ಅಹ್ಮದ್ ಬಾವ, ಕಾರ್ಯಕ್ರಮ ಸಂಘಟಕರಾಗಿ ಮುಹಮ್ಮದ್ ಬೆಳ್ಳಚ್ಚಾರ್, ಮಾಧ್ಯಮ ಪ್ರತಿನಿಧಿಯಾಗಿ ಅಬ್ದುಲ್ ಹಮೀದ್ ಗೋಳ್ತಮಜಲ್ ಹಾಗೂ ಐದು ಯೋಜನೆಗಳ ಉಸ್ತುವಾರಿಯಾಗಿ ಎಫ್.ಎಂ. ಬಶೀರ್ (ಆಹಾರ), ಸಿದ್ದಿಕ್ ಅಬ್ಬಾಸ್ (ಆರೋಗ್ಯ) , ಆಬಿದ್ ಅಸ್ಗರ್ ಮತ್ತು ಅಬ್ದುಲ್ ರಝಾಕ್ (ಶಿಕ್ಷಣ), ಮುಹಮ್ಮದ್ ಹನೀಫ್ (ಮೂಲಭೂತ ಸೌಕರ್ಯ ಹಾಗೂ ವೀಶೇಷ ಮಕ್ಕಳ ಪಾಲನೆ), ಕೆ.ಎಸ್.ಅಬೂಬರ್ (ಸ್ವ-ಉದ್ಯೋಗ) ಹಾಗೂ ತಾಹಿರ್ ಇಸ್ಮಾಯಿಲ್, ಹಕೀಂ ಕಲಾಯಿ ಅವರಿಗೆ ವಿಶೇಷ ಜವಾಬ್ದಾರಿ ನೀಡಲಾಯಿತು. ಬೃಹತ್ ಯೋಜನೆಗಳನ್ನು ಸ್ಥಾಪಕ ಅಧ್ಯಕ್ಷ ಎಚ್.ಕೆ.ಖಾಸಿಂ ಅಹ್ಮದ್ ವಹಿಸಿಕೊಂಡರು. 

ಈ ಸಂದರ್ಭದಲ್ಲಿ ರಶೀದ್ ಕಕ್ಕಿಂಜೆ, ಇದ್ದಿಕುಂಞಿ, ಸಾದ್, ಖಲೀಲ್ ಉಪಸ್ಥಿತರಿದ್ದರು. ಮುಹಮ್ಮದ್ ಹನೀಫ್ ಸ್ವಾಗತಿಸಿ, ಕಾರ್ಯದರ್ಶಿ ಆಬಿದ್ ಅಸ್ಗರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News