ಬೊಲಿವಿಯದ 118 ವರ್ಷದ ಹಿರಿಯಜ್ಜಿ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ

Update: 2018-08-29 16:30 GMT

ಸಕಬ (ಬೊಲಿವಿಯ) ಆ. 29: ಬೊಲಿವಿಯ ದೇಶದ 118 ವರ್ಷದ ಮಹಿಳೆ ಜೂಲಿಯಾ ಫ್ಲೋರ್ಸ್ ಕಾಲ್ಕ್ ಜಗತ್ತಿನ ಅತಿ ಹಿರಿಯ ಜೀವಂತ ವ್ಯಕ್ತಿಯಾಗಿದ್ದಾರೆ. ಅವರು ಈಗಲೂ ತನ್ನ ಮಾತೃಭಾಷೆ ‘ಕ್ವೆಚುವ’ದಲ್ಲಿ ಹಾಡುಗಳನ್ನು ಹಾಡುತ್ತಾರೆ ಹಾಗೂ ‘ಚರಾಂಗೊ’ ಎಂಬ ಸಣ್ಣ ಗಿಟಾರ್ ನುಡಿಸುತ್ತಾರೆ.

ತನ್ನ ಸುದೀರ್ಘ ಜೀವನದಲ್ಲಿ ಅವರು ಎರಡು ಜಾಗತಿಕ ಯುದ್ಧಗಳನ್ನು ಕಂಡಿದ್ದಾರೆ, ತನ್ನ ದೇಶ ಬೊಲಿವಿಯದಲ್ಲಿ ನಡೆದ ಕ್ರಾಂತಿಗಳಿಗೆ ಸಾಕ್ಷಿಯಾಗಿದ್ದಾರೆ ಹಾಗೂ ತನ್ನ 3,000 ಜನಸಂಖ್ಯೆಯ ಸಣ್ಣ ಗ್ರಾಮೀಣ ಪಟ್ಟಣ 5 ದಶಕಗಳ ಅವಧಿಯಲ್ಲಿ 1,75,000ಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯ ನಗರವಾಗಿ ಪರಿವರ್ತನೆಯಾಗಿರುವುದನ್ನು ಕಂಡಿದ್ದಾರೆ.

ಫ್ಲೋರ್ಸ್ ಕಾಲ್ಕ್ ಹೊಂದಿರುವ ರಾಷ್ಟ್ರೀಯ ಗುರುತು ಚೀಟಿಯ ಪ್ರಕಾರ, ಅವರು ಹುಟ್ಟಿದ್ದು ಬೊಲಿವಿಯ ಪರ್ವತ ಪ್ರದೇಶದಲ್ಲಿರುವ ಗಣಿ ಶಿಬಿರವೊಂದರಲ್ಲಿ 1900 ಅಕ್ಟೋಬರ್ 26ರಂದು.

ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿಲ್ಲ

ಈ ಹಿರಿಯಜ್ಜಿಯ ಪರವಾಗಿ ಯಾವುದೇ ಅರ್ಜಿ ಬಂದಿಲ್ಲ ಎಂದು ‘ಗಿನ್ನೆಸ್ ವಿಶ್ವ ದಾಖಲೆಗಳ’ ವಕ್ತಾರರೊಬ್ಬರು ಹೇಳಿದರು.

ಆದರೆ, ತನ್ನ ಹೆಸರು ದಾಖಲೆ ಪುಸ್ತಕದಲ್ಲಿ ದಾಖಲಾಗಿಲ್ಲ ಎಂಬ ಯಾವುದೇ ಚಿಂತೆಯನ್ನು ಫ್ಲೋರ್ಸ್ ಹೊಂದಿಲ್ಲ. ವಾಸ್ತವವಾಗಿ ಅವರು ಈ ದಾಖಲೆಯ ಬಗ್ಗೆ ಕೇಳಿಯೇ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News