ಎಚ್1-ಬಿ ವೀಸಾಗಳ ‘ಆದ್ಯತಾ ವಿಲೇವಾರಿ’ ಅಮಾನತು ವಿಸ್ತರಣೆ

Update: 2018-08-29 16:42 GMT

ವಾಶಿಂಗ್ಟನ್, ಆ. 29: ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಲ್ಲಿ ಜನಪ್ರಿಯವಾಗಿರುವ ಎಚ್1-ಬಿ ವೀಸಾ ಅರ್ಜಿಗಳ ‘ಆದ್ಯತಾ’ ವಿಲೇವಾರಿ ಮೇಲೆ ವಿಧಿಸಲಾಗಿದ್ದ ತಾತ್ಕಾಲಿಕ ಅಮಾನತನ್ನು ಅಮೆರಿಕ ವಿಸ್ತರಿಸಿದೆ.

ಹಿಂಬಾಕಿ (ಬ್ಯಾಕ್‌ಲಾಗ್) ಅರ್ಜಿಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಅಮೆರಿಕ ಈ ಕ್ರಮಗಳನ್ನು ತೆಗೆದುಕೊಂಡಿದೆ.

‘ಆದ್ಯತಾ’ ವಿಲೇವಾರಿಯಲ್ಲಿ, ಎಚ್-1ಬಿ ವೀಸಾ ಅರ್ಜಿಗಳನ್ನು ಅವುಗಳ ಸಾಮಾನ್ಯ ವಿಲೇವಾರಿ ಅವಧಿಯಾಗಿರುವ ಸರಾಸರಿ 6 ತಿಂಗಳ ಬದಲಿಗೆ ಕೇವಲ 15 ದಿನಗಳಲ್ಲಿ ವಿಲೇವಾರಿ ಮಾಡಲಾಗುವುದು. ಇದಕ್ಕಾಗಿ 1,225 ಡಾಲರ್ (86,181 ರೂಪಾಯಿ) ಶುಲ್ಕ ವಿಧಿಸಲಾಗುತ್ತದೆ.

ಸರದಿ ಸಾಲನ್ನು ತಪ್ಪಿಸಲು ಕೆಲವು ಕಂಪೆನಿಗಳು ಈ ಮಾರ್ಗವನ್ನು ಅನುಸರಿಸುತ್ತವೆ.

ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ಮಂಗಳವಾರ ಪ್ರಕಟಿಸಿರುವಂತೆ, ಅಮಾನತು ಮುಂದಿನ ವರ್ಷದ ಫೆಬ್ರವರಿ 19ರವರೆಗೆ ಮುಂದುವರಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News