ಬಂಟಕಲ್ಲು-ಹೇರೂರಲ್ಲಿ ಕೃಷಿ ಮಾಹಿತಿ ಸಭೆ
Update: 2018-08-29 22:29 IST
ಉಡುಪಿ, ಆ. 29: ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾಪು ವಲಯ ಸಮಿತಿ ವತಿಯಿಂದ ಅಡಿಕೆ ಸಿಂಪರಣಾ ಯಂತ್ರ ಪ್ರಾತ್ಯಕ್ಷತೆ ಮತ್ತು ಕೃಷಿ ಮಾಹಿತಿ ಕಾರ್ಯಕ್ರಮ ಸೆ.1ರಂದು ಶನಿವಾರ ಸಂಜೆ 4:30ಕ್ಕೆ ಬಂಟಕಲ್ಲು ಹೇರೂರು ಕುಂಜರ್ಗ ರಾಜೇಂದ್ರ ಪ್ರಭು ಇವರ ತೋಟದಲ್ಲಿ ನಡೆಯಲಿದೆ.
ಅಡಿಕೆ ಬೆಳೆಗೆ ಬಳಸುವ ಯಂತ್ರೋಪಕರಣಗಳ ಪ್ರಾತ್ಯಕ್ಷತೆ ಹಾಗೂ ವೈಜ್ಞಾನಿಕ, ಸಾವಯವ ಕ್ರಮದಿಂದ ಕಡಿಮೆ ವೆಚ್ಚದಲ್ಲಿ ಲಾಭದಾಯಕವಾದ ಕೃಷಿ ಮಾಡುವ ಬಗ್ಗೆ ಪೂರ್ಣ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಲಾ ಗುತ್ತದೆ. ಆಸಕ್ತ ಕೃಷಿಕರು ಇದರಲ್ಲಿ ಭಾಗವಹಿಸುವಂತೆ ಜಿಲ್ಲಾ ಕೃಷಿಕ ಸಂಘ ವಿನಂತಿಸಿದೆ.