ಸಪ್ತಭಾಷಾ ‘ಸಾಹಿತ್ಯ-ಸಂಗೀತ’ ಸೌಹಾರ್ದ ಸಂಗಮ
ಮಂಗಳೂರು, ಆ.29: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದ.ಕ. ಮತ್ತು ಉಡುಪಿ ಇದರ ಸಹಕಾರ ದೊಂದಿಗೆ ಸೆ.1ರಂದು ಸಂಜೆ 4 ಗಂಟೆಗೆ ಸುರತ್ಕಲ್‌ನ ಗೋವಿಂದ ದಾಸ ಕಾಲೇಜು ಸಭಾಭವನದಲ್ಲಿ ‘ಸಪ್ತಭಾಷಾ ಸಾಹಿತ್ಯ-ಸಂಗೀತ ಸೌಹಾರ್ದ ಸಂಗಮ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಶಾಸಕ ಭರತ್ ಶೆಟ್ಟಿ ಉದ್ಘಾಟಿಸಲಿದ್ದು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಡಾ.ಬಿ. ಮುರಳೀಧರ ರಾವ್, ಕಾಟಿಪಳ್ಳ ನೂರುಲ್ ಹುದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಬದ್ರುದ್ದೀನ್ ಪಣಂಬೂರು, ಕರ್ನಾಟಕ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಂಘದ ಅಧ್ಯಕ್ಷ ಉರ್ಬನ್ ಪಿಂಟೊ, ಗೋವಿಂದ ದಾಸ ಕಾಲೇಜಿನ ಉಪಪ್ರಾಂಶುಪಾಲ ಕೃಷ್ಣ ಮೂರ್ತಿ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದ.ಕ. ಮತ್ತು ಉಡುಪಿ ಇದರ ಅಧ್ಯಕ್ಷ ಜಗದೀಶ್ ಶೆಟ್ಟಿ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯು.ಎಚ್. ಖಾಲಿದ್ ಉಜಿರೆ ವಹಿಸಲಿದ್ದು, ರಘು ಇಡ್ಕಿದು (ಕನ್ನಡ), ಶಿವಾನಂದ ಕರ್ಕೇರ (ತುಳು), ಇಬ್ರಾಹೀಂ ತಣ್ಣೀರುಬಾವಿ (ಬ್ಯಾರಿ), ಕುಸುಮಾ ಕೆ.ಆರ್ (ಹಿಂದಿ), ಸ್ಮಿತಾ ಎಸ್. ಪ್ರಭು (ಕೊಂಕಣಿ), ವಿಲ್ಸನ್ ಕಟಿಲ್ (ಕ್ರಿಶ್ಚನ್ ಕೊಂಕಣಿ), ಮುಹಮ್ಮದ್ ಕೆ. (ಮಲೆಯಾಳಮ್), ವಿಜಯಲಕ್ಷ್ಮೀ ಕಟೀಲ್ (ತುಳು) ಹಾಗೂ ಶ್ವೇತಾ ಸುರತ್ಕಲ್ (ಕನ್ನಡ) ಮುಂತಾದವರು ಕವಿಗಳಾಗಿ ಭಾಗವಹಿಸಲಿದ್ದಾರೆ.
ರವೀಂದ್ರ ಪ್ರಭು, ಪುಷ್ಪಲ್‌ಕುಮಾರ್, ಮುರಳೀಧರ್ ಕಾಮತ್, ಮುಹಮ್ಮದ್ ಇಕ್ಬಾಲ್, ರೋನಿ ಕ್ರಾಸ್ತಾ, ರಂಜನ್ ದಾಸ್, ಶಮೀರ್ ಮುಲ್ಕಿ, ಗುರುಪ್ರಿಯ, ಪಲ್ಲವಿ ಪ್ರಭು, ಹುಸೈನ್ ಕಾಟಿಪಳ್ಳ ಮುಂತಾದವರಿಂದ ಗಾಯನಗಳು ನಡೆಯಲಿದೆ ಎಂದು ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.