×
Ad

ಜೆಡಿಎಸ್‌ನಿಂದ ಉಳ್ಳಾಲದಲ್ಲಿ ಚುನಾವಣಾ ಪ್ರಚಾರ

Update: 2018-08-29 22:34 IST

ಮಂಗಳೂರು, ಆ. 29: ಉಳ್ಳಾಲದಲ್ಲಿ ನಡೆಯುವ ಸ್ಥಳೀಯ ನಗರಸಭೆ ಚುನಾವಣೆ ಪ್ರಯುಕ್ತ ಯುವ ಜನತಾ ದಳ, ಮಹಿಳಾ ಘಟಕ, ಹಿಂದುಳಿದ ಘಟಕ, ಎಸ್ಸಿ-ಎಸ್ಟಿ ಘಟಕಗಳ ವತಿಯಿಂದ ಉಳ್ಳಾಲದ ಕಾರ್ಯಕರ್ತರೊಂದಿಗೆ ಎಲ್ಲ ವಾರ್ಡ್‌ಗಳಲ್ಲಿ  ಪ್ರಚಾರ ನಡೆಯಿತು.

24ನೇ ವಾರ್ಡ್‌ನ ಅಭ್ಯರ್ಥಿ ಹಂಝ ಪರ ಜಿಲ್ಲಾ ನಾಯಕರಾದ ರಾಂ ಗಣೇಶ್, ಸುಶೀಲ್ ನೊರನ್ಹಾ, ಎಸ್.ರಮೇಶ್, ರತ್ನಾಕರ್ ಸುವರ್ಣ, ಲತೀಫ್ ಒಳಚ್ಚಿಲ್ ಮುಂದಾಳತ್ವದಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಅಜ್ಮಲ್, ತೋಪಿಕ್, ಶಾಖರ್, ಶಫೀಕ್ ಕೇಮ್, ಹಕೀಂ, ಕಲಾದಾರ್, ಬಾತೀಮ್, ಸಂಶೀರ್, ಇಸ್ಮಾಯೀಲ್, ಸವಾದ್, ಜಿಯಾದ್ ಮುಂತಾದವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News