ಮಹಿಳೆಯರ 4x400 ರಿಲೇಯಲ್ಲಿ ಪೂವಮ್ಮ ತಂಡಕ್ಕೆ ಚಿನ್ನ

Update: 2018-08-30 13:57 GMT

ಜಕಾರ್ತ, ಆ.30: ಏಶ್ಯನ್ ಗೇಮ್ಸ್ ನ ಮಹಿಳೆಯರ 4x400 ರಿಲೇಯಲ್ಲಿ ಭಾರತದ  ಎಂ.ಆರ್.ಪೂವಮ್ಮ  ತಂಡ ಚಿನ್ನ ಗೆದ್ದುಕೊಂಡಿದೆ.

ಎಂಆರ್ ಪೂವಮ್ಮ, ಹಿಮಾ ದಾಸ್ , ಸರಿತಾ ಬೆನ್ ಗಾಯಕವಾಡ್ , ವಿಸ್ಮಯ ಕೊರೊತ್ ನೇತೃತ್ವದ ತಂಡ  4x400 ರಿಲೇಯ ಫೈನಲ್ ನಲ್ಲಿ  3 ನಿಮಿಷ 28.72 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಚಿನ್ನ ಪಡೆದಿದೆ.  ಬಹರೈನ್ (3:30.61 ) ಬೆಳ್ಳಿ ಮತ್ತು ವಿಯೆಟ್ನಾಂ (3:33.23) ಕಂಚು ಪಡೆಯಿತು.

ಏಶ್ಯನ್ ಗೇಮ್ಸ್ ನಲ್ಲಿ ಹಾಲಿ ಚಾಂಪಿಯನ್ ಭಾರತದ ಮಹಿಳೆಯರ ರಿಲೇ ತಂಡ  ಸತತ ಐದನೇ ಬಾರಿ  ಚಿನ್ನ ಗೆದ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News