ಏಶ್ಯನ್ ಗೇಮ್ಸ್: ಭಾರತದ ಪುರುಷರ 4x400 ರಿಲೇ ತಂಡಕ್ಕೆ ಬೆಳ್ಳಿ

Update: 2018-08-30 14:24 GMT

 ಜಕಾರ್ತ, ಆ.30: ಭಾರತದ ಪುರುಷರ 4x400  ರಿಲೇ ತಂಡ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದೆ.

ಗೇಮ್ಸ್‌ನ 12ನೇ ದಿನವಾದ ಗುರುವಾರ ಮುಹಮ್ಮದ್ ಕುನ್ಹು, ಧಾರುನ್ ಅಯ್ಯಸ್ವಾಮಿ, ಮುಹಮ್ಮದ್ ಅನಸ್ ಹಾಗೂ ರಾಜೀವ್ ಅರೋಕಿಯಾ ಅವರನ್ನೊಳಗೊಂಡ ಭಾರತದ ರಿಲೇ ತಂಡ  ಫೈನಲ್ ನಲ್ಲಿ 3:01.85 ಸೆಕೆಂಡ್‌ನಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆಯಿತು.

3:00.56 ಸೆಕೆಂಡ್‌ನಲ್ಲಿ ಗುರಿ ತಲುಪಿ ಏಶ್ಯಾ ಗೇಮ್ಸ್‌ನಲ್ಲಿ ದಾಖಲೆ ನಿರ್ಮಿಸಿದ ಕತರ್ ತಂಡ ಮೊದಲ ಸ್ಥಾನವನ್ನು ಪಡೆದರೆ, ಜಪಾನ್ ತಂಡ(3:01.94 ಸೆ.)ಕಂಚಿಗೆ ತೃಪ್ತಿಪಟ್ಟುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News