ಬಂಟ್ವಾಳ ಪುರಸಭಾ ಚುನಾವಣೆ: ಕಾಂಗ್ರೆಸ್, ಬಿಜೆಪಿ ಸೇರಿ 71 ಮಂದಿ ಅಭ್ಯರ್ಥಿಗಳು

Update: 2018-08-30 14:31 GMT

ಬಂಟ್ವಾಳ, ಆ. 30:  ಬಂಟ್ವಾಳ ಪುರಸಭಾ ಚುನಾವಣಾ ಕಣದಲ್ಲಿ ಕಾಂಗ್ರೆಸ್‍ನ 25, ಬಿಜೆಪಿಯ 27, ಜೆಡಿಎಸ್‍ನ 5, ಎಸ್‍ಡಿಪಿಐನ 12, ಸಿಪಿಐ 1, ಪಕ್ಷೇತರ 1 ಸೇರಿ ಒಟ್ಟು 71 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.  

ಕಳೆದ ಬಾರಿ 23 ವಾರ್ಡುಗಳಿದ್ದ ಬಂಟ್ವಾಳ ಪುರಸಭೆಯ ಸದಸ್ಯಬಲ ಈ ಬಾರಿ 27ಕ್ಕೆ ವೃದ್ಧಿಗೊಂಡಿದೆ. ಕಣದಲ್ಲಿರುವ ಅಭ್ಯರ್ಥಿಗಳು ಮತ್ತು ಮತಗಟ್ಟೆಗಳ ವಿವರ ಇಲ್ಲಿದೆ.

ವಾರ್ಡ್ 1-ಲೊರೆಟ್ಟೊಪದವು: ಬಿ.ವಾಸುಪೂಜಾರಿ (ಕಾಂಗ್ರೆಸ್), ಚಂದ್ರಶೇಖರ ಪೂಜಾರಿ (ಬಿಜೆಪಿ), ರಿಯಾಝ್ ಲೊರೆಟ್ಟೊಪದವು (ಎಸ್‍ಡಿಪಿಐ) ಅಭ್ಯರ್ಥಿಗಳು. ಅಗ್ರಾರ್ ಕ್ರಿಸ್ತಜ್ಯೋತಿ ಪ್ರೌಢಶಾಲೆಯಲ್ಲಿ ಎರಡು ಮತಗಟ್ಟೆಗಳು.

ವಾರ್ಡ್ 2-ಮಂಡಾಡಿ: ಗಂಗಾಧರ ಪೂಜಾರಿ ಮಂಡಾಡಿ (ಕಾಂಗ್ರೆಸ್), ಬಿ.ದಿನೇಶ ಭಂಡಾರಿ (ಬಿಜೆಪಿ) ಅಭ್ಯರ್ಥಿಗಳು, ಮಂಡಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆ.

ವಾರ್ಡ್ 3-ಮಣಿ: ಹೇಮಾವತಿ (ಕಾಂಗ್ರೆಸ್), ಮೀನಾಕ್ಷೀ ಜೆ.ಗೌಡ (ಬಿಜೆಪಿ). ಅಗ್ರಾರ್ ಚರ್ಚ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಗಳು.

ವಾರ್ಡ್ 4-ಕಾಲೇಜು ರಸ್ತೆ: ಪ್ರತಿಮಾ ರವಿಕುಮಾರ್ (ಕಾಂಗ್ರೆಸ್), ರೇಖಾ ರಮಾನಾಥ ಪೈ (ಬಿಜೆಪಿ) ಅಭ್ಯರ್ಥಿಗಳು. ಎಸ್‍ವಿಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿರುವ ಅತೀ ಸೂಕ್ಷ್ಮ ಮತಗಟ್ಟೆ.

ವಾರ್ಡ್ 5 ಜಕ್ರಿಬೆಟ್ಟು: ಜನಾರ್ಧನ ಚೆಂಡ್ತಿಮಾರ್ (ಕಾಂಗ್ರೆಸ್), ವಿಶ್ವನಾಥ ಚಂಡ್ತಿಮಾರ್ (ಬಿಜೆಪಿ) ಅಭ್ಯರ್ಥಿಗಳು. ಜಕ್ರಿಬೆಟ್ಟು ಅಂಗನವಾಡಿ ಕೇಂದ್ರದಲ್ಲಿರುವ ಮತಗಟ್ಟೆ.

ವಾರ್ಡ್ 6-ಹೊಸ್ಮರ್: ಜಯಂತಿ ಸೋಮಪ್ಪ ಪೂಜಾರಿ (ಕಾಂಗ್ರೆಸ್), ದೇವಕಿ ಶಿವಪ್ಪ ಪೂಜಾರಿ (ಬಿಜೆಪಿ) ಅಭ್ಯರ್ಥಿಗಳು. ಎಸ್‍ವಿಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿರುವ ಮತಗಟ್ಟೆ.

ವಾರ್ಡ್ 7-ಬಂಟ್ವಾಳ ಪೇಟೆ: ಧನವಂತಿ ಮಹಾಬಲ ಬಂಗೇರ (ಕಾಂಗ್ರೆಸ್), ಶಶಿಕಲಾ ಪ್ರಭಾಕರ್ (ಬಿಜೆಪಿ) ಅಭ್ಯರ್ಥಿಗಳು. ಎಸ್‍ವಿಎಸ್ ದೇವಳ ಕನ್ನಡ ಮಾಧ್ಯಮ ಶಾಲೆಯಲ್ಲಿರುವ ಮತಗಟ್ಟೆ.

ವಾರ್ಡ್ 8-ಕೆಳಗಿನಪೇಟೆ: ಮುಹಮ್ಮದ್ ಸಗೀರ್ ಬಿ.ಎಲ್ (ಕಾಂಗ್ರೆಸ್), ಮುನೀಶ್ ಅಲಿ ಮಹಮ್ಮದ್ (ಎಸ್‍ಡಿಪಿಐ), ಉಮರಬ್ಬ (ಬಿಜೆಪಿ), ಹಾರೂನ್ ರಶೀದ್ (ಜೆಡಿಎಸ್) ಅಭ್ಯರ್ಥಿಗಳು. ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿರುವ ಮತಗಟ್ಟೆ.

ವಾರ್ಡ್ 9-ಭಂಡಾರಿಬೆಟ್ಟು: ಜಗದೀಶ್ ಕುಂದರ್ (ಕಾಂಗ್ರೆಸ್), ಹರಿಪ್ರಸಾದ್ (ಬಿಜೆಪಿ) ಅಭ್ಯರ್ಥಿಗಳು. ಭಂಡಾರಿಬೆಟ್ಟು ಶ್ರೀ ವೆಂಕಟರಮಣ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯ ದಕ್ಷಿಣ ಭಾಗದ ಮತಗಟ್ಟೆ.

ವಾರ್ಡ್ 10-ಕಾಮಾಜೆ: ವನಜಾಕ್ಷಿ ಬಿ. ಶೇಖರ (ಸಿಪಿಐ-ಕಾಂಗ್ರೆಸ್ ಬೆಂಬಲಿತ), ಶೋಭಾ,ಹರಿಶ್ಚಂದ್ರ (ಬಿಜೆಪಿ) ಅಭ್ಯರ್ಥಿಗಳು. ಭಂಡಾರಿಬೆಟ್ಟು ಶ್ರೀವೆಂಕಟರಮಣ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಭಾಗದ ಮತಗಟ್ಟೆ.

ವಾರ್ಡ್ 11-ಸಂಚಯಗಿರಿ: ಸುಜಾತಾ ಎಸ್.ಅಮೀನ್ (ಕಾಂಗ್ರೆಸ್), ಜಯಂತಿ ವಸಂತ ಕುಲಾಲ್ (ಬಿಜೆಪಿ) ಅಭ್ಯರ್ಥಿಗಳು. ಮೊಡಂಕಾಪು ಕಾರ್ಮೆಲ್ ಸಂಯುಕ್ತ ಪದವಿಪೂರ್ವ ಕಾಲೇಜುವಿನ ದಕ್ಷಿಣ ಭಾಗದ ಮತಗಟ್ಟೆ.

ವಾರ್ಡ್ 12-ಅಜ್ಜಿಬೆಟ್ಟು: ವಸಂತಿ (ಜೆಡಿಎಸ್-ಕಾಂಗ್ರೆಸ್ ಬೆಂಬಲಿತ), ವಿದ್ಯಾವತಿ ಪ್ರಮೋದ್

ಕುಮಾರ್ (ಬಿಜೆಪಿ) ಅಭ್ಯರ್ಥಿಗಳು. ಬಿ.ಮೂಡ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ದಕ್ಷಿಣ ಭಾಗದಲ್ಲಿರುವ ಮತಗಟ್ಟೆ.

ವಾರ್ಡ್ 13-ಗೂಡಿನಬಳಿ: ನೆಫಿಸಾ ಹನೀಫ್ (ಕಾಂಗ್ರೆಸ್), ಸಂಶಾದ್ (ಎಸ್‍ಡಿಪಿಐ), ಕೌಸರ್
ಬಾನು (ಬಿಜೆಪಿ) ಅಭ್ಯರ್ಥಿಗಳು. ಗೂಡಿನಬಳಿಯ ಹಯಾತುಲ್ ಇಸ್ಲಾಂ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ.

ವಾರ್ಡ್ 14-ಜೋಡುಮಾರ್ಗ-ಕೈಕುಂಜೆ: ಕೆ. ಸುಗುಣ ಕಿಣಿ (ಬಿಜೆಪಿ), ಶೆಹನಾಝ್ ರಹೀಂ (ಕಾಂಗ್ರೆಸ್), ಝೀನತ್ ಫಿರೋಜ್ (ಎಸ್‍ಡಿಪಿಐ) ಅಭ್ಯರ್ಥಿಗಳು. ಈ ವಾರ್ಡಿನ ಎಪಿಎಂಸಿ ಕಚೇರಿ ಜೋಡುಮಾರ್ಗ ಮತಗಟ್ಟೆ ಅತೀಸೂಕ್ಷ್ಮವಾದರೆ, ಪಕ್ಕದಲ್ಲೇ ಇರುವ ಅಂಗನವಾಡಿ ಕೇಂದ್ರ ಕೈಕುಂಜ ಸೂಕ್ಷ್ಮಮತಗಟ್ಟೆ.

ವಾರ್ಡ್ 15-ಎಪಿಎಂಸಿ ಕೈಕುಂಜೆ: ಅರ್ಲ ಗೋವಿಂದ ಪ್ರಭು (ಬಿಜೆಪಿ), ಲೋಕೇಶ್ ಸುವರ್ಣ (ಕಾಂಗ್ರೆಸ್), ಅಭ್ಯರ್ಥಿಗಳು. ಈ ವಾರ್ಡಿಗೆ ಅಜ್ಜಿಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ಹೈಸ್ಕೂಲು ವಿಭಾಗದ ಪೂರ್ವಭಾಗದ ಮತಗಟ್ಟೆ. 

ವಾರ್ಡ್ 16-ನಂದರಬೆಟ್ಟು: ಮುಹಮ್ಮದ್ ನಂದರಬೆಟ್ಟು (ಕಾಂಗ್ರೆಸ್), ಶಾಹುಲ್ ಹಮೀದ್ ಎಸ್.ಎಚ್ (ಎಸ್‍ಡಿಪಿಐ), ಸಲಿಮ್ (ಬಿಜೆಪಿ) ಅಭ್ಯರ್ಥಿಗಳು. ಸರಕಾರಿ ಪದವಿಪೂರ್ವ ಕಾಲೇಜು ಹೈಸ್ಕೂಲ್ ವಿಭಾಗ ಅಜ್ಜಿಬೆಟ್ಟಿನ ಬಿ.ಮೂಡ ಪೂರ್ವ ಭಾಗದ ಮತಗಟ್ಟೆ.

ವಾರ್ಡ್ 17-ಪರ್ಲಿಯಾ: ಅಬ್ದುಲ್ ಖಾದರ್ ಇಕ್ಬಾಲ್ (ಪಕ್ಷೇತರ), ಲುಕ್ಮಾನ್ (ಕಾಂಗ್ರೆಸ್), ಮಹಮ್ಮದ್ ಇಕ್ಬಾಲ್ ಮದ್ದಾ (ಎಸ್‍ಡಿಪಿಐ), ಅನಂತ ಕೃಷ್ಣ ನಾಯಕ್ (ಬಿಜೆಪಿ) ಅಭ್ಯರ್ಥಿಗಳು. ಕೊಡಂಗೆ ಶಾಲೆಯ ಮತಗಟ್ಟೆ.

ವಾರ್ಡ್ 18-ಶಾಂತಿ ಅಂಗಡಿ: ಹಸೈನಾರ್ (ಕಾಂಗ್ರೆಸ್), ಬಶೀರ್ ಪಲ್ಲ (ಎಸ್‍ಡಿಪಿಐ), ಮಹೇಶ ಶೆಟ್ಟಿ(ಬಿಜೆಪಿ) ಅಭ್ಯರ್ಥಿಗಳು.  ಕೊಡಂಗೆ ಬಿ.ಮೂಡ ದ.ಕ.ಜಿಪಂ ಹಿ.ಪ್ರಾ.ಶಾಲೆ ಮತಗಟ್ಟೆ.

ವಾರ್ಡ್ 19-ಅದ್ದೇಡಿ: ಮುಹಮ್ಮದ್ ಶರೀಫ್ (ಕಾಂಗ್ರೆಸ್), ಇಸಾಕ್ ಶಾಂತಿಯಂಗಡಿ (ಎಸ್‍ಡಿಪಿಐ), ಶೇಕ್ ಶಾಹಿದ್ ಹುಸೇನ್ (ಬಿಜೆಪಿ) ಅಭ್ಯರ್ಥಿಗಳು. ದ.ಕ.ಜಿಪಂ ಹಿ.ಪ್ರಾ.ಶಾಲೆ ಕೊಡಂಗೆ ಬಿ.ಮೂಡದಲ್ಲಿರುವ ಮತಗಟ್ಟೆ.

ವಾರ್ಡ್ 20-ಮೊಡಂಕಾಪು: ಲೋಲಾಕ್ಷ ಶೆಟ್ಟಿ (ಕಾಂಗ್ರೆಸ್), ಲತೀಫ್ ಕೆ.ಎಚ್ (ಎಸ್‍ಡಿಪಿಐ), ಎಂ. ಸತೀಶ್ ಶೆಟ್ಟಿ        (ಬಿಜೆಪಿ) ಅಭ್ಯರ್ಥಿಗಳು. ದೀಪಿಕಾ ಪ್ರೌಢಶಾಲೆ ಮೊಡಂಕಾಪು ಮತಗಟ್ಟೆ.

ವಾರ್ಡ್ 21-ತಲಪಾಡಿ: ರಾಮಕೃಷ್ಣ ಆಳ್ವ (ಕಾಂಗ್ರೆಸ್), ರಾಮಣ್ಣ ಶೆಟ್ಟಿ (ಎಸ್‍ಡಿಪಿಐ), ಪುಷ್ಪರಾಜ್ ಶೆಟ್ಟಿ (ಬಿಜೆಪಿ), ಅಭ್ಯರ್ಥಿಗಳು. ದೀಪಿಕಾ ಹೈಸ್ಕೂಲು ಮೊಡಂಕಾಪು ದ.ಭಾಗ, ಉತ್ತರ ಭಾಗ ಎಂದು ಇಲ್ಲಿ ಎರಡು ಮತಗಟ್ಟೆಗಳಿವೆ.

ವಾರ್ಡ್ 22-ಪಲ್ಲಮಜಲು: ನಳಿನಾಕ್ಷಿ ಆನಂದ ಕುಲಾಲ್ (ಕಾಂಗ್ರೆಸ್), ಚೈತನ್ಯ ಎ.ದಾಸ್ (ಬಿಜೆಪಿ), ಅಭ್ಯರ್ಥಿಗಳು. ಬಿ.ಮೂಡ ಪಲ್ಲಮಜಲು ಶಾಲೆಯ ಮತಗಟ್ಟೆ.

ವಾರ್ಡ್ 23-ಜೈನರಪೇಟೆ: ಮುಹಮ್ಮದ್ ನಿಸಾರ್ (ಕಾಂಗ್ರೆಸ್), ಇದ್ರೀಸ್ ಪಿ.ಜೆ (ಎಸ್‍ಡಿಪಿಐ), ಲಕ್ಷಣ್ ರಾಜ್ ಪಿ.ವಿ (ಬಿಜೆಪಿ), ಶಫೀಕ್ (ಜೆಡಿಎಸ್), ಅಭ್ಯರ್ಥಿಗಳು. ಪಾಣೆಮಂಗಳೂರು ಪೇಟೆ ದ.ಕ.ಜಿಪಂ ಹಿ.ಪ್ರಾ.ಶಾಲೆಯಲ್ಲಿ ಮತಗಟ್ಟೆ.

ವಾರ್ಡ್ 24-ಆಲಡ್ಕ: ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ (ಕಾಂಗ್ರೆಸ್), ಯೂಸುಫ್ ಆಲಡ್ಕ (ಎಸ್‍ಡಿಪಿಐ), ಜಿ.ಜಿ. ಮುಹಮ್ಮದ್ (ಬಿಜೆಪಿ), ಮುಹಮ್ಮದ್ ಅಮಾನುಲ್ಲಾ (ಜೆಡಿಎಸ್) ಅಭ್ಯರ್ಥಿಗಳು. ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಮತಗಟ್ಟೆ.

ವಾರ್ಡ್ 25-ಬೋಳಂಗಡಿ: ಜೆಸಿಂತಾ ಡಿಸೋಜ (ಕಾಂಗ್ರೆಸ್), ಯಶೋಧ ಜಗನ್ನಾಥ (ಬಿಜೆಪಿ),
ಬಿ.ಎಸ್. ಖೈರುನ್ನೀಸ (ಜೆಡಿಎಸ್) ಅಭ್ಯರ್ಥಿಗಳು. ಬೋಳಂಗಡಿ ಹಿ.ಪ್ರಾ.ಶಾಲೆಯಲ್ಲಿ ಮತಗಟ್ಟೆ.

ವಾರ್ಡ್ 26-ಮೆಲ್ಕಾರ್: ಗಾಯತ್ರಿ ಪ್ರಕಾಶ್ (ಕಾಂಗ್ರೆಸ್), ಉಷಾಲತಾ ಉಮೇಶ (ಬಿಜೆಪಿ) ಅಭ್ಯರ್ಥಿಗಳು. ಬೋಳಂಗಡಿ ಶಾಲೆಯಲ್ಲಿ ಮತಗಟ್ಟೆ

ವಾರ್ಡ್ 27-ಬೊಂಡಾಲ: ಸುರೇಶ್ ನಾಯ್ಕ (ಕಾಂಗ್ರೆಸ್), ಜಯರಾಮ ನಾಯ್ಕ (ಬಿಜೆಪಿ) ಅಭ್ಯರ್ಥಿಗಳು. ಈ ವಾರ್ಡಿಗೆ ಬೊಂಡಾಲ ಹಿ.ಪ್ರಾ.ಶಾಲೆಯಲ್ಲಿ ಎರಡು ಮತಗಟ್ಟೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News