ಜೆ.ಸಿ.ಐ ಭಟ್ಕಳ ವತಿಯಿಂದ ಸರಹದ್ದು ಫಲಕ ದೇಣಿಗೆ
Update: 2018-08-30 20:13 IST
ಭಟ್ಕಳ, ಆ. 30: ಜೂನಿಯರ್ಸ್ ಚೇಂಬರ್ಸ್ ಆಫ್ ಇಂಡಿಯಾ ಭಟ್ಕಳ ಘಟಕದಿಂದ ಗ್ರಾಮೀಣ ಪೊಲೀಸ್ ಠಾಣೆ, ಅಗ್ನಿಶಾಮಕ ದಳ ಹಾಗೂ ರೇಲ್ವೆ ಇಲಾಖೆಗೆ ಸರಹದ್ದು ಫಲಕವನ್ನು ದೇಣಿಗೆ ನೀಡಲಾಯಿತು.
ಜೆಸಿಐ ರಾಷ್ಟ್ರೀಯ ಅಧ್ಯಕ್ಷ ಸೆನೆಟರ್ ಅರ್ಪಿತ್ ಹಾಥಿ ಸರಹದ್ದು ಫಲಕವನ್ನು ಹಸ್ತಾಂತರಿಸಿದರು.
ಜೆ.ಸಿ.ಐ ವಲಯ 15ರಲ್ಲಿ ಭಟ್ಕಳ ಸಿಟಿ ಜೆಸಿಐ ಚಟುವಟಿಕೆಗಳಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದು ಉತ್ತಮವಾಗಿ ಕಾರ್ಯಾಚರಿಸುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ವಲಯ 15 ರ ಅಧ್ಯಕ್ಷ ರಾಕೇಶ್ ಕುಂಜೂರು, ಉಪಾಧ್ಯಕ್ಷ ರಾಘವೇಂದ್ರ ಕರವಾಲು, ಭಟ್ಕಳ ಸಿಟಿ ಅಧ್ಯಕ್ಷ ಕೆ. ಅಬ್ದುಲ್ ಜಬ್ಬಾರ್, ನಾಗರಾಜ್ ಶೇಟ್, ರಮೇಶ್ ಖಾರ್ವಿ, ಗ್ರಾಮೀಣ ಪೊಲೀಸ್ ಠಾಣಾ ಪಿ.ಎಸ್.ಐ ರವಿ ಜಿ.ಎ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.