ಎಲ್ಲ ದಲಿತ ಚಳುವಳಿಗಳನ್ನು ನಕ್ಸಲ್ ಗೆ ಹೋಲಿಸುವ ಷಡ್ಯಂತ್ರ ನಡೆಯುತ್ತಿದೆ: ಅರುಂಧತಿ ರಾಯ್, ಬೆಜವಾಡ ವಿಲ್ಸನ್

Update: 2018-08-30 15:55 GMT

ಹೊಸದಿಲ್ಲಿ, ಆ.30: ಐವರು ಮಾನವ ಹಕ್ಕುಗಳ ಹೋರಾಟಗಾರರ ಬಂಧನವನ್ನು ವಿರೋಧಿಸಿ ಪ್ರಗತಿಪರ ಚಿಂತಕರ ಗುಂಪು ಗುರುವಾರ ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ನ್ಯಾಯವಾದಿ ಪ್ರಶಾಂತ್ ಭೂಷಣ್, ಸಾಮಾಜಿಕ ಕಾರ್ಯಕರ್ತೆ ಅರುಣಾ ರಾಯ್ ಮತ್ತು ಬೆಜವಾಡ ವಿಲ್ಸನ್, ಗುಜರಾತ್ ಶಾಸಕ ಜಿಗ್ನೇಶ್ ವೇವಾನಿ, ಲೇಖಕಿ ಅರುಂಧತಿ ರಾಯ್ ಹಾಗೂ ಇತರರು ಉಪಸ್ಥಿತರಿದ್ದರು.

ದಲಿತರನ್ನು ಸಮರ್ಥಿಸಿದಾಗಲೆಲ್ಲಾ ಸರಕಾರವೇ ಅದನ್ನು ವಿರೋಧಿಸುತ್ತಿದೆ. ಭೀಮಾ ಕೋರೆಗಾಂವ್‌ನಲ್ಲಿ ನಾವು ದಲಿತರ ವಿಜಯದ ಸಂಕೇತವನ್ನು ಆಚರಿಸಲಿದ್ದೆವು. ಅದರಲ್ಲಿ ತಪ್ಪೇನಿದೆ? ಮೊಟ್ಟಮೊದಲ ಬಾರಿಗೆ ದಲಿತರಿಗೆ ಆಚರಿಸಲು ಒಂದು ಕಾರಣ ಸಿಕ್ಕಿತ್ತು. ಆದರೆ ಅದಕ್ಕೆ ನಿಮ್ಮ ವಿರೋಧವಿದೆ. ಇದು ಸ್ವಾತಂತ್ರದ ಪ್ರಶ್ನೆ ಎಂದು ಸಫಾಯಿ ಕರ್ಮಚಾರಿ ಆಂದೋಲನದ ರಾಷ್ಟ್ರೀಯ ಸಂಚಾಲಕ ಬೆಜವಾಡ ವಿಲ್ಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅರುಣಾ ರಾಯ್, ಇದು ಅಘೋಷಿತ ತುರ್ತುಸ್ಥಿತಿ, ಮತಾಂಧತೆ ಮತ್ತು ಗುಜರಾತ್ ಮಾದರಿಯ ಮಿಶ್ರಣವಾಗಿದೆ. ಅವರ ಎರಡು ಕಾರ್ಯಗಳನ್ನು ಮಾಡಲು ಬಯಸುತ್ತಾರೆ.

ಒಂದು, ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ಮಾತನಾಡುವವರನ್ನು ಭಯಪಡಿಸುವುದು ಮತ್ತು ಎರಡನೆಯದ್ದು, ದಲಿತರ ಸಮರ್ಥನೆಯನ್ನು ನಿರಾಕರಿಸುವುದು. ಎಲ್ಲ ದಲಿತ ಚಳುವಳಿಯನ್ನು ನಕ್ಸಲ್‌ಗೆ ಹೋಲಿಸುವ ಮೂಲಕ ಅದನ್ನು ತಿರಸ್ಕರಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಮಾವೋವಾದಿಗಳು ಪ್ರಧಾನಿ ಮೋದಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂಬ ಆರೋಪ ಮೋದಿ ಮತ್ತು ಅಮಿತ್ ಶಾ ಸೂಚನೆಯಂತೆ ಮಹಾರಾಷ್ಟ್ರ ಪೊಲೀಸರು ರಚಿಸಿದ ಕಟ್ಟುಕತೆಯಷ್ಟೇ. ಆಮೂಲಕ ಇವರು 2019ರ ಚುನಾವಣೆಗೂ ಮುನ್ನ ಮೋದಿ ಪರ ಜನರಲ್ಲಿ ದಯೆ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಜಿಗ್ನೇಶ್ ಮೇವಾನಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News