ತನ್ನ ಗೆಳೆಯರ ಕಪ್ಪು ಹಣ ಬಿಳುಪು ಮಾಡುವ ಮೋದಿಯಿಂದ ನೋಟ್ ಬ್ಯಾನ್: ರಾಹುಲ್ ಗಾಂಧಿ

Update: 2018-08-30 16:27 GMT

ಹೊಸದಿಲ್ಲಿ, ಆ. 30: ಪ್ರಧಾನಿ ನರೇಂದ್ರ ಮೋದಿ ಅವರು 2016 ನವೆಂಬರ್ 8ರಂದು ಘೋಷಿಸಿದ ನಗದು ನಿಷೇಧ ಪ್ರಮಾದ ಅಲ್ಲ. ಬದಲಾಗಿ ದೊಡ್ಡ ವ್ಯವಹಾರಗಳಿಗೆ ನೆರವು ನೀಡಲು ಪ್ರಜೆಗಳ ಮೇಲಿನ ದಾಳಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 2016ರಲ್ಲಿ ನಗದು ನಿಷೇಧಿಸಿದ ಬಳಿಕ 500 ರೂಪಾಯಿ ಹಾಗೂ 1000 ರೂಪಾಯಿಯ ಶೇ. 99 ನೋಟುಗಳು ಬ್ಯಾಂಕ್ ವ್ಯವಸ್ಥೆಗೆ ಹಿಂದಿರುಗಿವೆ ಎಂದು ಆರ್‌ಬಿಐಯ ವಾರ್ಷಿಕ ವರದಿ ತಿಳಿಸಿದ ಒಂದು ದಿನದ ಬಳಿಕ ಪತ್ರಿಕಾಗೋಷ್ಠಿ ಯಲ್ಲಿ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, '' ದೊಡ್ಡ ಹಗರಣಕ್ಕಿಂತ ನೋಟು ನಿಷೇಧ ಚಿಕ್ಕದಲ್ಲ.'' ಎಂದಿದ್ದಾರೆ. ತಮ್ಮ ಕಪ್ಪು ಹಣ ಬಿಳುಪು ಮಾಡಲು ಕ್ರೋನಿ ಬಂಡವಾಳಶಾಹಿ (ವಂಚಕ ಬಂಡವಾಳಶಾಹಿ) ಗಳಿಗೆ ನೆರವು ನೀಡುವ ಉದ್ದೇಶವನ್ನು ನಗದು ನಿಷೇಧ ಹೊಂದಿತ್ತು. ದೊಡ್ಡ ಕಾರ್ಪೊರೇಟರ್‌ಗಳಿಗೆ ನೆರವು ನೀಡಲು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮ ನಾಶಪಡಿಸುವ ಉದ್ದೇಶ ಇದರದ್ದಾಗಿತ್ತು. ನಗದು ನಿಷೇಧ ಪ್ರಮಾದ ಅಲ್ಲ. ಇದು ಬಡವರನ್ನು ನಾಶ ಮಾಡಲು ಉದ್ದೇಶ ಪೂರ್ವಕ ಯತ್ನ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

''ನಗದು ನಿಷೇಧದ ಎಲ್ಲ ಉದ್ದೇಶಗಳು ವಿಫಲವಾಗಿವೆ ಎಂದು ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ನಗದು ನಿಷೇಧದ ವಾಸ್ತವ ಕಾರಣವನ್ನು ಪ್ರತಿಯೊಬ್ಬರಿಗೆ ತಿಳಿಸಲು ನಾನು ಬಯಸುತ್ತೇನೆ. ಪ್ರಧಾನಿ ಮೋದಿ ಅವರ 10ರಿಂದ 15 ಬಂಡವಾಳಶಾಹಿ ಗೆಳೆಯರು ಸುಸ್ತಿದಾರರು. ಅವರ ತಮ್ಮ ಕಪ್ಪು ಹಣವನ್ನು ಬಿಳುಪು ಮಾಡಲು ಪ್ರಧಾನಿ ಅವರು ನಗದು ನಿಷೇಧ ಮಾಡಿದರು'' ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News